Home » Kasaragod Student Death: ಕಾಸರಗೋಡು-ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿ ಶವ ಪತ್ತೆ

Kasaragod Student Death: ಕಾಸರಗೋಡು-ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿ ಶವ ಪತ್ತೆ

1 comment
Kasaragod Student Death

Kasaragod Student Death: ಪೆರಿಯದಲ್ಲಿರುವ ಕೇರಳ ಕೇಂದ್ರ ವಿಶ್ವವಿದ್ಯಾಲಯದ ಹಾಸ್ಟೆಲ್‌ನಲ್ಲಿ ಒಡಿಶಾ ಮೂಲದ ವಿದ್ಯಾರ್ಥಿನಿ ರೂಬಿ ಪಟೇಲ್ (24) ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಇದನ್ನೂ ಓದಿ: Home Decor Tips: ಮನೆಯಲ್ಲಿ ಗಡಿಯಾರವನ್ನು ಹಾಕಲು ಸರಿಯಾದ ಸ್ಥಳ ಯಾವುದು? ಇಲ್ಲಿದೆ ಉತ್ತರ

ರೂಬಿ ವಿಶ್ವವಿದ್ಯಾಲಯದಲ್ಲಿ ಹಿಂದಿ ಮತ್ತು ಕಂಪರೇಟಿವ್‌ ಸಾಹಿತ್ಯ ವಿಭಾಗದ ವಿದ್ಯಾರ್ಥಿನಿ. ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಹಾಸ್ಟೆಲ್‌ನ ಶೌಚಾಲಯದಲ್ಲಿ ನೇಣು ಬಿಗಿದಿ ಸ್ಥಿತಿಯಲ್ಲಿ ಈಕೆಯ ಶವ ಪತ್ತೆಯಾಗಿದ್ದು, ಬೇಕಲ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ. ಮೃತದೇಹವನ್ನು ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.

ಇದನ್ನೂ ಓದಿ: Zodiac Signs: ಈ ಅಕ್ಷರದಿಂದ ಆರಂಭ ಆಗೋ ಜನರು ಸಖತ್ ರೊಮ್ಯಾಂಟಿಕ್ ಅಂತೆ, ನೀವಿದ್ದೀರ ಲಿಸ್ಟ್ ನಲ್ಲಿ?

ಈ ದುರದೃಷ್ಟಕರ ಘಟನೆಯ ಮೊದಲು ಕಳೆದ ಫೆಬ್ರವರಿಯಲ್ಲಿ ಉತ್ತರ ಪ್ರದೇಶದ ಎಂ.ಇಡಿ ವಿದ್ಯಾರ್ಥಿ ನಿಧಿಶ್‌ ಯಾದವ್‌ (28) ಕೂಡಾ ಹಾಸ್ಟೆಲ್‌ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ರೂಬಿ ಸಾವಿಗೆ ಪ್ರತಿಕ್ರಿಯೆಯಾಗಿ, ಎಸ್‌ಎಫ್‌ಐ ಮತ್ತು ಎಬಿವಿಪಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಮಾನಸಿಕ ಒತ್ತಡದಿಂದ ಸಂಶೋಧನಾ ವಿದ್ಯಾರ್ಥಿನಿ ಜೀವನ ಅಂತ್ಯಗೊಳಿಸದ್ದಾಗಿ ಇವರು ಆರೋಪ ಮಾಡಿದ್ದಾರೆ. ಮನೋವೈದ್ಯರನ್ನು ಕ್ಯಾಂಪಸ್‌ನಲ್ಲಿ ನೇಮಿಸುವಂತೆ ಎಸ್‌ಎಫ್‌ಐ ಸಂಘಟನೆಯ ವಿದ್ಯಾರ್ಥಿಗಳು ಉಪಕುಲಪತಿಗಳ ಕೊಠಡಿಗೆ ನುಗ್ಗಿ ಪ್ರತಿಭಟನೆ ಮಾಡಿದರು.

ಒಬ್ಬ ವಿದ್ಯಾರ್ಥಿನಿ ತನ್ನ ಜೀವನವನ್ನು ಕೊನೆಗೊಳಿಸಿದ್ದು, ಇನ್ನಿಬ್ಬರು ಕ್ಯಾಂಪಸ್‌ನಲ್ಲಿ ಆತ್ಮಹತ್ಯೆಗೆ ಯತ್ನ ಮಾಡಿದ್ದಾರೆ ಎಂದು ಇವರು ಹೇಳಿದ್ದಾರೆ.

You may also like

Leave a Comment