Home » Crime: ಕೊಡಗು: ಲೈಂಗಿಕ ಕಿರುಕುಳ ನೀಡಿ ಕೊಲೆ ಬೆದರಿಕೆ: ಅಸ್ಸಾಂ ಮೂಲದ ಕಾರ್ಮಿಕನ ಬಂಧನ

Crime: ಕೊಡಗು: ಲೈಂಗಿಕ ಕಿರುಕುಳ ನೀಡಿ ಕೊಲೆ ಬೆದರಿಕೆ: ಅಸ್ಸಾಂ ಮೂಲದ ಕಾರ್ಮಿಕನ ಬಂಧನ

0 comments

Crime: ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿ ಕೊಲೆ ಬೆದರಿಕೆ ಒಡ್ಡಿದ ಆರೋಪದಡಿಯಲ್ಲಿ ಅಸ್ಸಾಂ ಮೂಲದ ಕಾರ್ಮಿಕನನ್ನು ಬಂಧಿಸಲಾಗಿದೆ. ಸೋಮವಾರಪೇಟೆ ಸಮೀಪದ ಕಾರೆಕೊಪ್ಪದಲ್ಲಿ ಈ ಘಟನೆ ನಡೆದಿದೆ.

ಇಂದು ಬೆಳಿಗ್ಗೆ 8.30 ರ ಸಮಯದಲ್ಲಿ ಕಾರೆಕೊಪ್ಪದ ಮಹಿಳೆಯೊಬ್ಬರು ತೋಟದಲ್ಲಿ ಕೆಲಸಕ್ಕೆಂದು ಹೊರಟು ಬಂದವರು ಇತರೆ ಕಾರ್ಮಿಕರ ಬರುವಿಕೆಯನ್ನು ನಿರೀಕ್ಷಿಸುತ್ತಾ ರಸ್ತೆ ಬದಿಯಲ್ಲಿ ನಿಂತಿದ್ದರು. ಈ ಸಂದರ್ಭ ಅಪರಿಚಿತ ಪುರುಷನೋರ್ವ ಒಂಟಿಯಾಗಿದ್ದ ಈ ಮಹಿಳೆಯ ಮೇಲೆ ಎರಗಿ ಬಾಯಿಗೆ ಬಟ್ಟೆ ತುರುಕಿ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ್ದಾನೆ ಅಲ್ಲದೇ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಮಹಿಳೆ ಜೋರಾಗಿ ಬೊಬ್ಬಿಡುತ್ತಿದ್ದಾಗ ಸುತ್ತಮುತ್ತಲಿನವರು ಮಹಿಳೆಯನ್ನು ರಕ್ಷಣೆ ಮಾಡಿ, ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

You may also like