Home » Kolara; ತಂದೆಯಿಂದ ನಿರಂತರ ಅತ್ಯಾಚಾರ; ಮಗಳು ಗರ್ಭಿಣಿ!

Kolara; ತಂದೆಯಿಂದ ನಿರಂತರ ಅತ್ಯಾಚಾರ; ಮಗಳು ಗರ್ಭಿಣಿ!

0 comments

Kolara: ತನ್ನ ಮಗಳಿಗ ರಕ್ಷೆಯಾಗಿ ನಿಲ್ಲಬೇಕಾದ ತಂದೆಯೇ ಮಗಳ ಮೇಲೆ ಪೈಶಾಚಿಕ ಕೃತ್ಯ ಎಸಗಿದ್ದಾನೆ. ಮಗಳ ಮೇಲೆ ತಂದೆಯೋರ್ವ ನಿರಂತರ ಅತ್ಯಾಚಾರ ಮಾಡಿದ್ದು, ಇದೀಗ ಪಾಪಿ ತಂದೆಯಿಂದಲೇ ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಿದೆ.

ಕೋಲಾ ಜಿಲ್ಲೆ ಬಂಗಾರಪೇಟೆ ತಾಲೂಕಿನಲ್ಲಿ ಈ ಘಟನೆ ನಡೆದಿದೆ.

ಅಪ್ಪಯ್ಯಪ್ಪ ಎನ್ನುವ ತಂದೆ ತನ್ನ 20 ವರ್ಷದ ಮಗಳ ಮೇಲೆ ನಿರಂತರವಾಗಿ ಐದು ತಿಂಗಳಿನಿಂದ ಅತ್ಯಾಚಾರ ಮಾಡುತ್ತಿದ್ದಾನೆ. ಪರಿಣಾಮ ಮಗಳು ಗರ್ಭಿಣಿಯಾಗಿದ್ದಾಳೆ. ಹೊಟ್ಟೆನೋವು ಎಂದು ಡಾಕ್ಟರ್‌ ಬಳಿ ಹೋದಾಗ ತಂದೆಯ ನೀಚ ಕಾಮ ಕೃತ್ಯ ಬೆಳಕಿಗೆ ಬಂದಿದೆ.

ಆರೋಪಿ ಅಪ್ಪಯ್ಯಪ್ಪನಿಗೆ ಮೂರು ಹೆಣ್ಣು ಒಂದು ಗಂಡು ಮಗು ಇದೆ. ತಾಯಿ ಇಲ್ಲದ ಮಕ್ಕಳನ್ನು ಈತನೇ ನೋಡಿಕೊಳ್ಳುತ್ತಿದ್ದ. ಮೊದಲ ಇಬ್ಬರು ಹೆಣ್ಣು ಮಕ್ಕಳಿಗೆ ಈತ ಮದುವೆ ಮಾಡಿ ಕೊಟ್ಟಿದ್ದಾನೆ. ಆದರೆ ಕೊನೆಯ ಮಗಳನ್ನು ತನ್ನ ಕಾಮ ತೀರಿಸಲು ಬಳಸಿಕೊಂಡಿದ್ದಾರೆ. ಮಗಳು ಎನ್ನುವ ಪರಿಜ್ಞಾನವಿಲ್ಲದೆ ನಿರಂತರ ಅತ್ಯಾಚಾರ ಮಾಡಿದ್ದಾನೆ.

ನಂತರ ಮಗಳು ತಂದೆ ಅಪ್ಪಯ್ಯಪ್ಪನ ವಿರುದ್ಧ ದೂರು ನೀಡಿದ್ದು, ಕಾಮಸಮುದ್ರ ಪೊಲೀಸರು ಅಪ್ಪಯ್ಯಪ್ಪನನ್ನು ಬಂಧನ ಮಾಡಿದ್ದಾರೆ.

You may also like