Kollam: ತಮ್ಮ ಎರಡು ವರ್ಷದ ಮಗುವನ್ನು ಕೊಲೆ ಮಾಡಿಮ ನಂತರ ಪತಿ, ಪತ್ನಿ ನೇಣಿಗೆ ಶರಣಾಗಿರುವ ಘಟನೆ ಕೇರಳದ ಕೊಲ್ಲಂನಲ್ಲಿ ನಡೆದಿದೆ.
ಎರಡು ವರ್ಷದ ಮಗ ಆದಿ (2), ಅಜೀಶ್ (38), ಪತ್ನಿ ಸುಲು (36) ಮೃತರು. ಮಯ್ಯನಾಡ್ ಥಣ್ಣಿಯ ಮನೆಯಲ್ಲಿ ದಂಪತಿಗಳು ನೇಣಿಗೆ ಶರಣಾಗಿದ್ದಾರೆ.
ಗಲ್ಫ್‌ನಿಂದ ವಾಪಾಸಾಗಿದ್ದ ಅಜೀಶ್ ಕೊಲ್ಲಂಬಲ್ಲಿ ವಕೀಲರೊಬ್ಬರ ಸಹಾಯಕನಾಗಿದ್ದರು. ಅಜೀಶ್ ಪತ್ನಿ, ಮಗು, ಪೋಷಕರ ಜೊತೆ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದರು. ಬುಧವಾರ (ಮಾ.18) ಬೆಳಗ್ಗೆ ಅಜೀಶ್ ಪೋಷಕರು ಬಾಗಿಲು ತೆರೆಯದೇ ಇರುವುದನ್ನು ಕಂಡು ಅನುಮಾನಗೊಂಡು ಪರಿಶೀಲನೆ ಮಾಡಿದಾಗ ಮೃತ ಹೊಂದಿರುವುದು ಪತ್ತೆಯಾಗಿದ್ದಾರೆ.
ಅಜೀತ್ ಅವರಿಗೆ ಇತ್ತೀಚೆಗೆ ರಕ್ತದ ಕ್ಯಾನ್ಸರ್ ಇರುವುದು ಕಂಡು ಬಂದಿತ್ತು. ಇದರಿಂದ ಅಜೀಶ್ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಅಜೀಶ್ ಅವರಿಗೆ ಆರ್ಥಿಕ ಸಂಕಷ್ಟ ಕೂಡಾ ಇತ್ತು. ಇವರಿಗೆ ಸಾಲವಿದ್ದು, ಸಾಲ ತೀರಿಸಲು ಹೊಸ ಮನೆಯನ್ನು ಮಾರಾಟ ಮಾಡಿ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದರು.
ಪೊಲೀಸರು ಕೇಸು ದಾಖಲಿಸಿ ತನಿಖೆ ಮಾಡುತ್ತಿದ್ದಾರೆ.
