Home » ಕೋಟ: ಸ್ನೇಹಿತರ ನಡುವೆ ಜಗಳ, ಓರ್ವನ ಸಾವಿನಲ್ಲಿ ಅಂತ್ಯ

ಕೋಟ: ಸ್ನೇಹಿತರ ನಡುವೆ ಜಗಳ, ಓರ್ವನ ಸಾವಿನಲ್ಲಿ ಅಂತ್ಯ

0 comments

ಕೋಟ: ಸ್ನೇಹಿತರ ನಡುವೆ ನಡೆದ ಜಗಳದಿಂದ ಓರ್ವನ ಸಾವು ಸಂಭವಿಸಿದ್ದು ಮೃತನನ್ನು ಪಡುಕರೆ ಸಂತೋಷ್‌ ಮೊಗವೀರ (30) ಎಂದು ಗುರುತಿಸಲಾಗಿದೆ.

ಈ ಘಟನೆ ಬ್ರಹ್ಮಾವರ ತಾಲೂಕಿನ ಕೋಟತಟ್ಟು ಪಡಿಕರೆಯಲ್ಲಿ ರವಿವಾರ ರಾತ್ರ ನಡೆದಿದೆ.

ಸ್ನೇಹಿತರು ಹಾಗೂ ಪರಸ್ಪರ ಸಂಬಂಧಿಗಳಾದ ಇವರು ಕ್ಷುಲ್ಲಕ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದು, ಆಗ ಸಂತೋಷ್‌ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣ ಸ್ಥಳೀಯರ ಸಹಕಾರದಿಂದ ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದು, ಆದರೆ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿರುವುದಾಗಿ ತಿಳಿದು ಬಂದಿದೆ.

ಸಂಬಂಧಿಕರು ದೂರು ನೀಡಬೇಕಿದ್ದು, ಅನಂತರ ತನಿಖೆ ನಡೆಸಿ ಕ್ರಮಕೈಗೊಳ್ಳುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಗೆ ಸಂಬಂಧ ಪಟ್ಟಂತೆ ನಾಲ್ವರು ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.

You may also like