Home » Lakshmi Hebbalkar: ಲಕ್ಷ್ಮೀ ಹೆಬ್ಬಾಳ್ಕರ್‌ ಕಾರು ಅಪಘಾತ ಪ್ರಕರಣ; ಲಾರಿ ಚಾಲಕ ಅರೆಸ್ಟ್!

Lakshmi Hebbalkar: ಲಕ್ಷ್ಮೀ ಹೆಬ್ಬಾಳ್ಕರ್‌ ಕಾರು ಅಪಘಾತ ಪ್ರಕರಣ; ಲಾರಿ ಚಾಲಕ ಅರೆಸ್ಟ್!

0 comments
Gruha Lakshmi Scheme

Lakshmi Hebbalkar: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಕಾರು ಅಪಘಾತ ಮಾಡಿದ್ದ ಆರೋಪಿಯನ್ನು ಕಿತ್ತೂರು ಪೊಲೀಸರು ಬಂಧನ ಮಾಡಿದ್ದಾರೆ.

ಲಾರಿ ಚಾಲಕ ಅಪಘಾತ ಎಸಗಿ ಪರಾರಿಯಾಗಿದ್ದ. ಮಹಾರಾಷ್ಟ್ರದ ಪುಣೆ ಜಿಲ್ಲೆಯ ಇಂದಾಪುರ ತಕ್ರಾರವಾಡಿ ಗ್ರಾಮದ ಮಧುಕರ ಸೋಮವಂಶಿ ಅಪಘಾತ ಎಸಗಿ ಪರಾರಿಯಾಗಿದ್ದ. ಜ.14 ರಂದು ಬೆಳಗ್ಗಿನ ಜಾವ ಅಪಘಾತ ಸಂಭವಿಸಿತ್ತು. ಈ ಅಪಘಾತದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಬೆನ್ನಿಗೆ ಗಂಭೀರ ಗಾಯ ಕೂಡಾ ಆಗಿತ್ತು. ಕಿತ್ತೂರು ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿತ್ತು. ಹಿರೇಬಾಗೇವಾಡಿ ಟೋಲ್‌ ಬಳಿಯ ಸಿಸಿಟಿವಿ ದೃಶ್ಯಾವಳಿ ಆಧರಿಸಿ 69 ಲಾರಿ ಚಾಲಕರ ವಿಚಾರಣೆ ಮಾಡಲಾಗಿತ್ತು.

ಮಧುಕರ ಸೋಮವಂಶಿ ಮೊದಲಿಗೆ ಅಪಘಾತ ಮಾಡಿಲ್ಲ ಎಂದು ಹೇಳಿದ್ದಾನೆ. ನಂತರ ಫೋನ್‌ ಕಾಲ್‌ ಡಿಟೇಲ್ಸ್‌ ಆಧರಿಸಿ ಪೊಲೀಸರು ಆರೋಪಿಯನ್ನು ಬಂಧನ ಮಾಡಿದ್ದಾರೆ.

You may also like