10
ಕನಕಪುರ (ಬೆಂಗಳೂರು ದಕ್ಷಿಣ): ವನ್ಯಜೀವಿಗಳನ್ನು ಬೇಟೆಯಾಡಲು ಬಚ್ಚಿಟ್ಟಿದ್ದ ನಾಡ ಬಾಂಬ್ ಸ್ಫೋಟಗೊಂಡು ಹಸುವಿನ ಬಾಯಿ ಛಿದ್ರ ಗೊಂಡಿರುವ ಘಟನೆ ಹೊಸದುರ್ಗ ರಾಮದೇವರ ಬೆಟ್ಟದ ಸಮೀಪ ದಲ್ಲಿನ ತಿಪ್ಪಯ್ಯನಕೆರೆ ಬಳಿ ನಡೆದಿದೆ.
ಕನಕಪುರ ತಾಲೂಕಿನ ಕೋಡಿಹಳ್ಳಿ ಹೋಬಳಿಯ ಹೊಸದುರ್ಗ ಗ್ರಾಮದ ರೈತ ರಾಮಣ್ಣ ಎಂಬುವರಿಗೆ ಸೇರಿದ ನಾಟಿ ಹಸುವಿನ ಬಾಯಿ ಛಿದ್ರಗೊಂಡಿದ್ದು ಹಸುವಿನ ಸ್ಥಿತಿ ಚಿಂತಾ ಜನಕವಾಗಿದೆ. ದನಗಳನ್ನು ಮೇಯಲು ಬಿಟ್ಟಿದ್ದ ವೇಳೆ ನಾಡಬಾಂಬ್ ಅನ್ನು ಹಸು ತಿನ್ನಲು ಮುಂದಾದಾಗ ಸ್ಫೋಟ ಗೊಂಡಿದೆ.
