Home » Bangalore: ಲಾಯರ್‌ ಜಗದೀಶ್‌ ಹತ್ಯೆ?- ರಕ್ತಸಿಕ್ತವಾಗಿ ರಸ್ತೆಯಲ್ಲಿ ಬಿದ್ದಿರುವ ದೇಹ!

Bangalore: ಲಾಯರ್‌ ಜಗದೀಶ್‌ ಹತ್ಯೆ?- ರಕ್ತಸಿಕ್ತವಾಗಿ ರಸ್ತೆಯಲ್ಲಿ ಬಿದ್ದಿರುವ ದೇಹ!

0 comments

Bangalore: ನೈಸ್‌ ರಸ್ತೆಯಲ್ಲಿ ವಕೀಲ ಜಗದೀಶ್‌ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ದೇಹವು ರಕ್ತಸಿಕ್ತಗೊಂಡಿದೆ. ಲಾಯರ್‌ ಜಗದೀಶ್‌ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ನೈಸ್‌ ರೋಡ್‌ನಲ್ಲಿ ರಕ್ತಸಿಕ್ತವಾಗಿ ದೇಹ ಬಿದ್ದಿದೆ. ವಿಕ್ಟೋರಿಯಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ವಕೀಲ ಜಗದೀಶ್‌ ಸಾವಿನ ಬಗ್ಗೆ ಹಲವು ಅನುಮಾನ ಮೂಡಿದ್ದು, ಜಗದೀಶ್‌ ಬಿದ್ದಿರುವ ಸ್ಥಳದಿಂದ 200 ಮೀಟರ್‌ ದೂರದಲ್ಲಿ ಕಾರು ಪತ್ತೆಯಾಗಿದೆ. ಕಾರು ಹಿಂದೆ ಮುಂದೆ ನಜ್ಜುಗುಜ್ಜಾಗಿದೆ.

ಘಟನೆ ಸಂಬಂಧ ಸಂಬಂಧಿಕರಿಂದ ಕೊಲೆ ಪ್ರಕರಣ ದಾಖಲಾಗಿದೆ. ಕೆಂಗೇರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

You may also like