Home » Suicide Video: ರೆಸಾರ್ಟ್ ಒಂದರ ಮಾಜಿ ನೌಕರನಿಂದ ಲೈವ್ ಸುಸೈಡ್ ಬೆದರಿಕೆ: ಅಲ್ಲಿನ ಅಕ್ರಮಗಳ ಬಗ್ಗೆ ಕೂಡ ವಿಡಿಯೋದಲ್ಲಿ ಬಹಿರಂಗ

Suicide Video: ರೆಸಾರ್ಟ್ ಒಂದರ ಮಾಜಿ ನೌಕರನಿಂದ ಲೈವ್ ಸುಸೈಡ್ ಬೆದರಿಕೆ: ಅಲ್ಲಿನ ಅಕ್ರಮಗಳ ಬಗ್ಗೆ ಕೂಡ ವಿಡಿಯೋದಲ್ಲಿ ಬಹಿರಂಗ

0 comments

Suicide Video: ಪ್ರವೀಣ್ ಅರವಿಂದ್ ಎಂಬಾತ ಫೇಸ್ಬುಕ್ ನಲ್ಲಿ ಲೈವ್(Face Book Live) ಬಂದು, ವಿರಾಜಪೇಟೆಯ ಮ್ಯಾಗ್ನೋಲಿಯ ರೆಸಾರ್ಟ್ ನ(Magnolia Estates & Resort) ಮಾಜಿ ನೌಕರನಾಗಿದ್ದೇನೆ. ಪೊಲೀಸರು(Police), ರೆಸಾರ್ಟ್ ಮಾಲೀಕರ(Resort Owner) ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ವಿಡಿಯೋ ಪೋಸ್ಟ್ ಮಾಡಿದ್ದಾನೆ.

ವಿರಾಜಪೇಟೆಯ ಮಾಕುಟ್ಟ ರಸ್ತೆಯಲ್ಲಿರುವ ರೆಸಾರ್ಟ್ ಮಾಲೀಕರಿಂದ, ಪ್ರವೀಣ್ ವಿರುದ್ಧ ಈ ಹಿಂದೆ ವಂಚನೆ ಆರೋಪ ಮಾಡಲಾಗಿತ್ತು. ನನಗೆ ತುಂಬಾ ಅನ್ಯಾಯವಾಗಿದೆ. ಈ ಪ್ರಪಂಚ ಬಿಟ್ಟು ಹೋಗುತ್ತಿದ್ದೇನೆ. ಹೆಂಡತಿ ಮಕ್ಕಳನ್ನು ಬಿಟ್ಟು ಹೋಗುತ್ತಿದ್ದೇನೆ. ನನಗಾದ ಅನ್ಯಾಯ ಟಾರ್ಚರ್ ಸಹಿಸಲಾಗುತ್ತಿಲ್ಲ.

ಸಾಮಾನ್ಯ ವ್ಯಕ್ತಿಯಾಗಿ ಮನೆ ಕಟ್ಟಬಾರದ? ಕಾರು ತೆಗಿಬಾರದಾ? ತಮಿಳುನಾಡಿನಿಂದ ನನ್ನ ಹೆಂಡತಿ ಮಕ್ಕಳನ್ನು ಅರೆಸ್ಟ್ ಮಾಡಿ ಕರೆತರುತ್ತಿದ್ದಾರೆ ಎಂದಿದ್ದಾನೆ. ರೆಸಾರ್ಟ್ ನಲ್ಲಿ ಬಾರಿ ಅಕ್ರಮಗಳಾಗಿದೆ. ರೆಸಾರ್ಟ್ ನಲ್ಲಿ ಅಕ್ರಮವಾಗಿ ಮರಗಳನ್ನು ಕಡಿಯಲಾಗಿದೆ. ಅರಣ್ಯ ಭೂಮಿ ಅತಿಕ್ರಮಣವಾಗಿದೆ. ಲೈಸೆನ್ಸ್ ಇಲ್ಲದೆ ವಿಲ್ಲಾಗಳನ್ನ ಕಟ್ಟಲಾಗಿದೆ ಎಂದು ಫೇಸ್ ಬುಕ್ ಲೈವ್‌ನಲ್ಲಿ ಪ್ರವೀಣ್ ರೆಸಾರ್ಟ್ನಲ್ಲಿ ನಡೆದ ಎಲ್ಲ ಅಕ್ರಮ ವ್ಯವರವನ್ನು ನೇರವಾಗಿ ವಿಡಿಯೋ ಮೂಲಕ ತಿಳಿಸಿದ್ದಾನೆ.

ನನ್ನ ದೇಹ ತೆಗೆಯುವ ಮೊದಲು ಅವರು ಅರೆಸ್ಟ್ ಆಗಬೇಕು. ಹೀಗೆ ಫೇಸ್ಬುಕ್ ನಲ್ಲಿ 15 ನಿಮಿಷದ ವಿಡಿಯೋ ಮಾಡಿದ ಪ್ರವೀಣ್, ವಿರಾಜಪೇಟೆ ನಗರದ ಗಾಂಧಿನಗರ ನಿವಾಸಿಯಾಗಿದ್ದಾನೆ. ಇದೀಗ ಪ್ರವೀಣ್ ಲೊಕೇಶನ್ ಅನ್ನು ಪೊಲೀಸರು ಹುಡುಕುತ್ತಿದ್ದಾರೆ ಎಂದು ಹೇಳಲಾಗಿದೆ.

You may also like