Lok Sabha Elections: ಲೋಕಸಭೆ ಚುನಾವಣೆಗೆ ಬಿಜೆಪಿ ಪರ ಮತಯಾಚನೆ ಮಾಡಿದ ಕಾರಣ ರಾಮನಗರ ಜಿಲ್ಲೆ ಕಗ್ಗಲಿಪುರ ಪೊಲೀಸ್ ಠಾಣಾ ವ್ಯಾಪ್ತಿಯ ಗಿರಿಗೌಡನ ದೊಡ್ಡಿಯಲ್ಲಿ ವ್ಯಕ್ತಿಯೋರ್ವರ ಮೇಲೆ ಹಲ್ಲೆ ನಡೆಸಿರುವ ಆರೋಪವೊಂದು ಕೇಳಿ ಬಂದಿದೆ.
ಇದನ್ನೂ ಓದಿ: Snakes: ಹಾವುಗಳು ದಿನಕ್ಕೆ ಎಷ್ಟು ಗಂಟೆಗಳ ಕಾಲ ಮಲಗುತ್ತವೆ? : ಎಲ್ಲಿ ಮಲಗುತ್ತವೆ ಗೊತ್ತಾ? : ಇಲ್ಲಿದೆ ವಿಶಿಷ್ಟ ಮಾಹಿತಿ
ಮಹಾದೇವ್ (32) ಎಂಬುವವರೇ ಹಲ್ಲೆಗೊಳಗಾದ ವ್ಯಕ್ತಿ. ಬಿಜೆಪಿ ಪರ ಮತ ಕೇಳಿದ್ದಕ್ಕೆ ಅವರ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಅವರ ಕುಟುಂಬದವರು ಆರೋಪ ಮಾಡಿದ್ದಾರೆ. ಈ ಕುರಿತು ಮಹಾದೇವ್ ಅವರನ್ನು ಗುಂಪೊಂದು ಥಳಿಸುವ ವೀಡಿಯೋವೊಂದು ಮೊಬೈಲ್‌ನಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: Astro Tips: ಈ ಒಂದು ಮಂತ್ರವನ್ನು ಜಪಿಸಿದರೆ ಸಾಕು, ಅತ್ತೆ ಸೊಸೆಯ ಜಗಳ ಮಾಯವಾಗುತ್ತೆ!
ಪಂಚಾಯಿತಿ ಮುಖಂಡರು ಥಳಿಸಿರುವ ಕುರಿತು ಆರೋಪ ಬಂದಿದೆ. ಇನ್ನೊಂದು ಹೇಳಿಕೆಯ ಪ್ರಕಾರ ರೌಡಿ ಚಟುವಟಿಕೆ ಮಾಡುತ್ತಿರುವ ಕಾರಣಕ್ಕೆ ಹಲ್ಲೆ ಮಾಡಲಾಗಿದೆ ಎಂದು ಕೆಲವರು ದೂರಿದ್ದಾರೆ. ಇದೀಗ ಹಲ್ಲೆಗೊಳಗಾದ ವ್ಯಕ್ತಿಯನ್ನು ಹಾರೋಹಳ್ಳಿಯ ದಯಾನಂದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಬಿಜೆಪಿ ಅಭ್ಯರ್ಥಿ ಮಂಜುನಾಥ್ ಪರ ಪ್ರಚಾರ ಮಾಡಿದ್ದಕ್ಕೆ ಇತ್ತೀಚೆಗೆ ಬಿಜೆಪಿ ಕಾರ್ಯಕರ್ತ ನವೀನ್ ಮೇಲೆ ಕೂಡಾ ಹಲ್ಲೆ ಮಾಡಲಾಗಿರುವ ಘಟನೆ ನಡೆದಿತ್ತು. ಇನ್ನೊಂದೆಡೆ ಮೈಸೂರು-ಕೊಡಗು ಅಭ್ಯರ್ಥಿ ಯದುವೀರ್ ಒಡೆಯರ್ ಪರ ಚುನಾವಣಾ ಪ್ರಚಾರ ಮಾಡಿದ ಬಿಜೆಪಿ ಕಾರ್ಯಕರ್ತರೊಬ್ಬರು ಹಿಟ್ ಆಂಡ್ ರನ್ ಗೆ ಮೃತ ಹೊಂದಿದ್ದರು. ಇದೊಂದು ಉದ್ದೇಶಪೂರ್ವಕ ಕೃತ್ಯ ಎಂದು ಬಿಜೆಪಿ ಹೇಳಿತ್ತು.
