Home » Murder: ಲಿವ್‌ ಇನ್‌ ಸಂಗಾತಿಯನ್ನು ಕೊಲೆಗೈದು ಶವವನ್ನು ಮಂಚದ ಬಾಕ್ಸ್‌ನಲ್ಲಿ ತುಂಬಿಟ್ಟ ಪ್ರಿಯಕರ!

Murder: ಲಿವ್‌ ಇನ್‌ ಸಂಗಾತಿಯನ್ನು ಕೊಲೆಗೈದು ಶವವನ್ನು ಮಂಚದ ಬಾಕ್ಸ್‌ನಲ್ಲಿ ತುಂಬಿಟ್ಟ ಪ್ರಿಯಕರ!

0 comments
Crime

Murder: ಹತ್ತು ವರ್ಷಗಳಿಂದ ಬೇರೆ ಮಹಿಳೆ ಜೊತೆ ಲಿವಿನ್‌ ಸಂಬಂಧದಲ್ಲಿದ್ದ ಲಿವ್‌ ಇನ್‌ ಸಂಗಾತಿಯನ್ನು ಹತ್ಯೆಗೈದು ನಂತರ ಶವವನ್ನು ಮಂಚದ ಬಾಕ್ಸ್‌ನಲ್ಲಿ ವ್ಯಕ್ತಿಯೊಬ್ಬ ತುಂಬಿಟ್ಟ ಘಟನೆ ಫರಿದಾಬಾದ್‌ನಲ್ಲಿ ನಡೆದಿದೆ.

ಸರನ್‌ ಪೊಲೀಸ್‌ ಠಾಣೆ ವ್ಯಾಪ್ತಿಯ ಜವಾಹರ್‌ ಕಾಲೋನಿಯಲ್ಲಿ ಕಳೆದ 10 ವರ್ಷಗಳಿಂದ ಜಿತೇಂದ್ರ ಮಹಿಳೆಯೊಬ್ಬಳಿಗೆ ಲಿವಿನ್‌ ಸಂಬಂಧದಲ್ಲಿದ್ದ. ಮಹಿಳೆಯನ್ನು ವ್ಯಕ್ತಿ ಕೊಲೆ ಮಾಡಿದ್ದು, ಆಕೆಯ ಶವವನ್ನು ಮಲಗುವ ಮಂಚದ ಕೆಳಗಿನ ಬಾಕ್ಸ್‌ನಲ್ಲಿ ತುಂಬಿಟ್ಟಿದ್ದ.

ಶವದ ವಾಸನೆ ಬರಬಾರದೆಂದು ಮನೆಯಲ್ಲಿ ಧೂಪ, ಊದಿನಕಡ್ಡಿಯ ಹೊಗೆಯನ್ನು ನಿರಂತರವಾಗಿ ಹಾಕುತ್ತಲೇ ಇದ್ದ. ನಂತರ ಕೊಲೆ ಮಾಡಿದ ಬಳಿಕ ವ್ಯಕ್ತಿ ಮಹಿಳೆಯನ್ನು ತಾನೇ ಕೊಂದಿದ್ದಾಗಿ ತನ್ನ ಅಜ್ಜಿಯ ಬಳಿ ಹೋಗಿ ಹೇಳಿದ್ದ. ಅಜ್ಜಿ ಗಾಬರಿಗೊಂಡಿದ್ದು, ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದ.

ಪೊಲೀಸರು ಘಟನಾ ಸ್ಥಳಕ್ಕೆ ಬಂದಿದ್ದು, ಬೀಗ ಮುರಿದು ಮಂಚದ ಬಾಕ್ಸ್‌ನಲ್ಲಿಟ್ಟಿದ್ದ ಶವವನ್ನು ಹೊರತೆಗೆದಿದ್ದಾರೆ. ಆರೋಪಿ ಪರಾರಿಯಾಗಿದ್ದಾನೆ.

You may also like