Home » Kerala: ಕೇರಳದ ಮದರಸಾ ಶಿಕ್ಷಕನಿಗೆ 187 ವರ್ಷ ಜೈಲು!

Kerala: ಕೇರಳದ ಮದರಸಾ ಶಿಕ್ಷಕನಿಗೆ 187 ವರ್ಷ ಜೈಲು!

0 comments
Rajasthan

Kannur: ಕೋವಿಡ್ ಸಾಂಕ್ರಾಮಿಕ ಲಾಕ್‌ಡೌನ್‌ ಸಮಯದಲ್ಲಿ ಎರಡು ವರ್ಷಗಳ ಕಾಲ 16 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಮದರಸಾ ಶಿಕ್ಷಕನಿಗೆ ತಳಿಪರಂಬ ತ್ವರಿತ ವಿಶೇಷ ನ್ಯಾಯಾಲಯ 187 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಅಳಕೋಡ್ ಪಂಚಾಯತ್‌ನ ಉದಯಗಿರಿ ಮೂಲದ 41 ವರ್ಷದ ಮೊಹಮ್ಮದ್ ರಫಿಗೆ 187 ವರ್ಷ ಜೈಲು ಶಿಕ್ಷೆ ಮತ್ತು 9.10 ಲಕ್ಷ ರೂ. ದಂಡ ವಿಧಿಸಿ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಆರ್. ರಾಜೇಶ್ ತೀರ್ಪು ನೀಡಿದ್ದಾರೆ. ರಫಿ 2020ರ ಮಾರ್ಚ್‌ನಲ್ಲಿ ಸಂತ್ರಸ್ತ ಬಾಲಕಿ 14 ವರ್ಷದವಳಾಗಿದ್ದಾಗ ಲೈಂಗಿಕ ದೌರ್ಜನ್ಯ ನಡೆಸಲು ಆರಂಭಿಸಿದ್ದ. ಆ ಬಳಿಕ ನಿರಂತರವಾಗಿ 2 ವರ್ಷ ಆಕೆಯ ಮೇಲೆ ದೌರ್ಜನ್ಯ ನಡೆಸಿ ಈ ವಿಷಯವನ್ನು ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿದ್ದ. ಬಾಲಕಿಯ ನಡವಳಿಕೆಯಲ್ಲಿ ಬದಲಾವಣೆ ಕಂಡ ಹಿನ್ನೆಲೆಯಲ್ಲಿ ಪಾಲಕರು ಆಕೆಯನ್ನು ಕೌನ್ಸಿಲಿಂಗ್‌ ಕೇಂದ್ರಕ್ಕೆ ಕರೆದೋಯ್ದಾಗ ಆಕೆ ತನ್ನ ಮೇಲಾದ ಲೈಂಗಿಕ ದೌರ್ಜನ್ಯವನ್ನು ಬಹಿರಂಗ ಪಡಿಸಿದ್ದಳು. ಬಳಿಕ ಪಳಯಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು.

You may also like