Chittur: ಪತಿ ಸಾಲ ತೀರಿಸದಿದ್ದಕ್ಕೆ ಪತ್ನಿಯನ್ನು ಮರಕ್ಕೆ ಕಟ್ಟಿ ಹಾಕಿ ಚಿತ್ರಹಿಂಸೆ ನೀಡಿರುವ ಘಟನೆ ಆಂಧ್ರಪ್ರದೇಶದ ಚಿತ್ತೂರಿನಲ್ಲಿ ನಡೆದಿದೆ.
ಸಿರಿಶಾ ಎಂಬ ಮಹಿಳೆಗೆ ಹಿಂಸೆ ಕೊಡಲಾಗಿದೆ. ಸಿರಿಶಾ ತನ್ನ ಮಗುವಿನ ಪರೀಕ್ಷಾ ಪ್ರಮಾಣಪತ್ರವನ್ನು ತರಲೆಂದು ಹೋಗಿದ್ದು, ಅಲ್ಲಿ ಗಮನಿಸಿದ ಮುನಿಕಣಪ್ಪ, ನಿನ್ನ ಪತಿ ಸಾಲ ಪಡೆದು ಮರುಪಾವತಿ ಮಾಡಿಲ್ಲ ಎಂದು ಕ್ಯಾತೆ ತೆಗೆದು ಮಹಿಳೆಯನ್ನು ಮರಕ್ಕೆ ಕಟ್ಟಿಹಾಕಿದ್ದಾನೆ.
ಪತಿ ಮುನಿಕಣ್ಣಪ್ಪನಿಂದ 80 ಸಾವಿರ ರೂಪಾಯಿ ಸಾಲ ಪಡೆದಿದ್ದು, ಸಾಲ ತೀರಿಸಲು ಸಾಧ್ಯವಾಗದೇ ದಂಪತಿ ಕುಪ್ಪಂಮಂಡಲದ ನಾರಾಯಣಪುರಂ ಗ್ರಾಮವನ್ನು ತೊರೆದು ಹೋಗಿದ್ದರು. ಸಿರಿಶಾ ತನ್ನ ಕುಟುಂಬವನ್ನು ಸಾಕಲು ಕೆಲಸ ಮಾಡುತ್ತಿದ್ದಾಳೆ. ಇದೀಗ ಗ್ರಾಮಕ್ಕೆ ಬಂದಿದ್ದ ಈಕೆಯನ್ನು ಕಂಡು ಮುನಿಕಣ್ಣಪ್ಪ ಸಾಲದ ಹಣ ಕೇಳಿ ಬೈದಿದ್ದು, ನಂತರ ಬೇವಿನ ಮರಕ್ಕೆ ಕಟ್ಟಿ ಹಾಕಿ, ಮನಬಂದಂಥೆ ಥಳಿಸಿ, ಜೀವ ಬೆದರಿಕೆ ಹಾಕಿದ್ದಾನೆ.
ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಸ್ಥಳಕ್ಕೆ ಬಂದ ಪೊಲೀಸರು ಮುನಿಕಣಪ್ಪನನ್ನು ಬಂಧಿಸಿದ್ದಾರೆ.
