Mandya: ಕಾಲ ಎಲ್ಲಿಯವರೆಗೂ ಕೆಟ್ಟಿ ಹೋಗಿದೆ ಎಂದರೆ ಇಂದು ಅಪ್ರಾಪ್ತ ಬಾಲಕರು ಕೂಡ ಲಾಂಗು, ಮಚ್ಚು ಹಿಡಿದು ಹಲ್ಲೆ ಮಾಡುವ ಮಟ್ಟಕ್ಕೆ ಇಳಿದುಬಿಟ್ಟಿದ್ದಾರೆ. ಹೌದು ಮಂಡ್ಯದಲ್ಲಿ ಒಂದು ಈ ರೀತಿಯ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದ್ದು ಹುಡುಗಿ ಒಬ್ಬಳಿಗಾಗಿ ಯುವಕನ ಮೇಲೆ ಅಪ್ರಾಪ್ತ ಬಾಲಕರು ಲಾಂಗು, ಮಚ್ಚು ಹಿಡಿದು ಅಲ್ಲೇ ನಡೆಸಿದ್ದಾರೆ.
ಯಸ್, ಲಾಂಗ್, ಮಚ್ಚು ಹಿಡಿದು ಅವಾಚ್ಯ ಶಬ್ದದಿಂದ ನಿಂದಿಸಿ ಯುವಕನಿಗೆ ಅಪ್ರಾಪ್ತ ಬಾಲಕರು ಥಳಿಸಿರುವ ಘಟನೆ ನಡೆದಿದ್ದು ಮಂಡ್ಯ ಹೊರವಲಯದ ಸ್ಮಶಾನಕ್ಕೆ ಕರಿತಂದು ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ. ಯುವತಿ ಒಬ್ಬಳ ವಿಚಾರವಾಗಿ ಯುವಕನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಇನ್ಯಾವತ್ತೂ ಮಂಡ್ಯಕ್ಕೆ ಬರಲ್ಲ ಬಿಟ್ಟು ಬಿಡಿ ಎಂದು ಬೇಡಿಕೊಂಡರು ಅಪ್ರಾಪ್ತ ಬಾಲಕರು ಯುವಕನಿಗೆ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ. ಮಂಡ್ಯದ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ.
