2
Mangalore: ಇ.ಡಿ ಅಧಿಕಾರಿಯಂತೆ ನಟಿಸಿ ಬಂಟ್ವಾಳದ ಉದ್ಯಮಿಯ ಮನೆಯನ್ನು ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೇರಳ ಪೊಲೀಸರು ಸೋಮವಾರ ಸಹಾಯಕ ಸಬ್ ಇನ್ಸ್‌ಪೆಕ್ಟರ್‌ನನ್ನು ಅಮಾನತುಗೊಳಿಸಿದ್ದಾರೆ.
ತ್ರಿಶೂರ್‌ನ ಕೊಡುಂಗಲ್ಲೂರು ಠಾಣೆಯ ಎಎಸ್‌ಐ ಶಹೀರ್‌ಬಾಬು (49) ಅಮಾನತುಗೊಂಡ ವ್ಯಕ್ತಿ.
ಜ.3 ರಂದು ಬಂಟ್ವಾಳ ತಾಲೂಕಿನ ಬೋಳಂತೂರು ನಾರ್ಶದ ಬೀಡಿ ಉದ್ಯಮಿ ಸುಲೈಮಾನ್ ಹಾಜಿ ಮನೆ ಮೇಲೆ ದಾಳಿ ನಡೆಸಿ ದರೋಡೆ ಮಾಡಲಾಗಿತ್ತು. ತನಿಖೆ ಸಂದರ್ಭ ಪ್ರಕರಣದ ರೂವಾರಿ ಶಹೀರ್‌ಬಾಬು ಎಂಬುದು ಪತ್ತೆಯಾಗಿತ್ತು. ಆತ ನಕಲಿ ತಂಡವನ್ನು ಕಟ್ಟಿಕೊಂಡು ಆತನ ಪ್ಲ್ಯಾನ್ ಪ್ರಕಾರ ದರೋಡೆ ನಡೆದಿತ್ತು.
ಈ ಹಿನ್ನೆಲೆಯಲ್ಲಿ ಶಹೀರ್ ಸೇರಿ ನಾಲ್ವರನ್ನು ವಿಟ್ಲ ಪೊಲೀಸರು ಬಂಧನ ಮಾಡಿದ್ದರು. ಸೋಮವಾರ ಎಎಸ್‌ಐ ಶಹೀರ್‌ಬಾಬು ನನ್ನು ಅಮಾನತುಗೊಳಿಸಿದ್ದಾರೆ.
