Home » ಮಂಗಳೂರು: ಊಟಕ್ಕೆಂದು ಪಿಜಿಯಿಂದ ಹೊರಗೆ ಹೋದ ಕಾಲೇಜು ವಿದ್ಯಾರ್ಥಿ ನಾಪತ್ತೆ

ಮಂಗಳೂರು: ಊಟಕ್ಕೆಂದು ಪಿಜಿಯಿಂದ ಹೊರಗೆ ಹೋದ ಕಾಲೇಜು ವಿದ್ಯಾರ್ಥಿ ನಾಪತ್ತೆ

0 comments
Missing Case

Mangalore: ಊಟಕ್ಕೆಂದು ಪಿಜಿಯಿಂದ ಹೊರಗೆ ಹೋಗಿದ್ದ ಕಾಲೇಜು ವಿದ್ಯಾರ್ಥಿ ನಾಪತ್ತೆಯಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ದೇರಳಕಟ್ಟೆಯಲ್ಲಿ ನಡೆದಿದೆ.

ಮಲಿಕ್‌ ಅಬೂಬಕರ್‌ ನಾಪತ್ತೆಯಾಗಿರುವ ವಿದ್ಯಾರ್ಥಿ.

ದೇರಳಕಟ್ಟೆ ಖಾಸಗಿ ಕಾಲೇಜಿನಲ್ಲಿ ಬಿಎನ್‌ವೈಎಸ್‌ ಶಿಕ್ಷಣ ಪಡೆಯುತ್ತಿದ್ದ. ಕೇರಳದ ಪಾಲಕ್ಕಾಡ್‌ ನಿವಾಸಿಯಾಗಿರುವ ಮಲಿಕ್‌ ಅಬೂಬಕ್ಕರ್‌, ದೇರಳಕಟ್ಟೆ ಬಳಿ ಅಬ್ದುಲ್‌ ಶರೀಫ್‌ ಎಂಬುವವರ ಪಿಜಿಯಲ್ಲಿ ವಾಸವಾಗಿದ್ದ. ರಾತ್ರಿ ಊಟಕ್ಕೆಂದು ಪಿಜಿಯಿಂದ ಹೊರ ಹೋಗಿದ್ದ ಈತ ನಾಪತ್ತೆಯಾಗಿದ್ದಾನೆ. ಪಿಜಿಗೆ ವಾಪಾಸಾಗಿಲ್ಲ.

ವಿದ್ಯಾರ್ಥಿಯ ತಾಯಿ ನೀಡಿದ ದೂರಿನ ಮೇರೆಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may also like