3
Mangaluru: ಮಂಗಳೂರಿನ ಪಚ್ಚನಾಡಿ ವೈದ್ಯನಾಥ ನಗರದಲ್ಲಿ ರಸ್ತೆ ವಿಸ್ತರಣೆ ಹೆಸರಿನಲ್ಲಿ ಸೂಕ್ತ ಆದೇಶವಿಲ್ಲದೇ ಮನೆಯ ಕಾಂಪೌಂಡ್ ಗೋಡೆಯನ್ನು ಧ್ವಂಸಗೊಳಿಸಿರುವ ಘಟನೆ ನಡೆದಿರುವ ಕುರಿತು ವರದಿಯಾಗಿದೆ.
ಗಣೇಶ್ ಎಂಬ ವ್ಯಕ್ತಿಯ ಜೊತೆ ಒಟ್ಟು 17 ಮಂದಿ ಗೂಂಡಾ ರೀತಿಯಲ್ಲಿ ವರ್ತನೆ ಮಾಡಿರುವ ಆರೋಪವಿದೆ ಎನ್ನಲಾಗಿದೆ.
ವಿಜೇಶ್ ಸಲ್ಡಾನ ಎಂಬುವವರ ಮನೆಯ ಕಾಂಪೌಂಡ್ ಗೋಡೆಯನ್ನು ಕೆಡವಿದ್ದಾರೆ ಎನ್ನುವ ಆರೋಪವಿದೆ. ಈ ಸಂದರ್ಭದಲ್ಲಿ ಅವಾಚ್ಯ ಶಬ್ದಗಳ ಬೈಗುಳ, ಗಲಾಟೆ ನಡೆದಿರುವ ಕುರಿತು ವರದಿಯಾಗಿದೆ. ಗಣೇಶ್‌ಗೆ ಕೆಲವು ಸ್ಥಳೀಯರು ಸಹಾಯ ಮಾಡಿದ್ದಾರೆ. ಒಟ್ಟು 17 ಜನರ ವಿರುದ್ಧ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
