Home » Mangalore: ವಾಟ್ಸಪ್‌ ಗ್ರೂಪ್‌ನಲ್ಲಿ ಪ್ರಚೋದನಕಾರಿ ಸಂದೇಶ ಫಾರ್ವಡ್‌; ಪ್ರಕರಣ ದಾಖಲು

Mangalore: ವಾಟ್ಸಪ್‌ ಗ್ರೂಪ್‌ನಲ್ಲಿ ಪ್ರಚೋದನಕಾರಿ ಸಂದೇಶ ಫಾರ್ವಡ್‌; ಪ್ರಕರಣ ದಾಖಲು

0 comments
Bengaluru

Mangalore: ಮಂಗಳೂರು ನಗರದ ಬಜ್ಪೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದ ಸುಹಾಸ್‌ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ “ಮಂಗಳೂರು ಮುಸ್ಲಿಮ್‌ ಯುವಸೇನೆʼ ಎಂಬ ವಾಟ್ಸಪ್‌ ಗ್ರೂಪ್‌ನಲ್ಲಿ ಪ್ರಚೋದನಕಾರಿ ಸಂದೇಶವನ್ನು ಫಾರ್ವಡ್‌ ಮಾಡಿದ್ದ ಆಧಾರದಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಪ್ರಚೋದನಕಾರಿ ಸಂದೇಶವನ್ನು ವಾಟ್ಸಪ್‌ ಗ್ರೂಪ್‌ನಲ್ಲಿ ಫಾರ್ವಡ್‌ ಮಾಡಿದ್ದ ವಿಟ್ಲದ ಮೊಹಮ್ಮದ್‌ ಆನಾಸ್‌ ಎಂಬಾತನನ್ನು ಪತ್ತೆ ಮಾಡಲಾಗಿದ್ದು, ಆತನ ವಿಚಾರಣೆ ನಡೆಸುತ್ತಿದ್ದಾರೆ.

ಈ ಸಂಬಂಧ ಮೂಡಬಿದಿರೆ ಪೊಲೀಸ್‌ ಠಾಣೆಯಲ್ಲಿ ಸೆಕ್ಷನ್‌ 353(2)ರ ಅಡಿ ಪ್ರಕರಣ ದಾಖಲು ಮಾಡಲಾಗಿದೆ. ಮಂಗಳೂರು ಸಿ.ಇ.ಎನ್‌ ಅಪರಾಧ ಪೊಲೀಸ್‌ ಠಾಣೆಗೆ ಈ ಪ್ರಕರಣದ ಹೆಚ್ಚಿನ ತನಿಖೆಗೆ ಹಸ್ತಾಂತರಿಸಲಾಗಿರುತ್ತದೆ. ಪೊಲೀಸ್‌ ತನಿಖೆ ಮುಂದುವರಿದಿದೆ.

You may also like