Home » Mangalore: ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ: ಚಾರ್ಜ್ ಶೀಟ್ ಸಲ್ಲಿಕೆ

Mangalore: ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ: ಚಾರ್ಜ್ ಶೀಟ್ ಸಲ್ಲಿಕೆ

0 comments
Praveen Nettaru

Praveen Nettaru: ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎನ್ ಐಎ ಅಧಿಕಾರಿಗಳು ಮೂವರು ತಲೆಮರೆಸಿಕೊಂಡವರು ಸೇರಿ ನಾಲ್ವರು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಕೆ ಮಾಡಿದ್ದಾರೆ.

ಅಬ್ದುಲ್ ನಾಸಿರ್, ನೌಶಾದ್, ಅಬ್ದುಲ್ ರಹ್ಮಾನ್ ಮತ್ತು ಅತೀಕ್ ಅಹ್ಮದ್ ಎಂಬವರ ವಿರುದ್ಧ ಎರಡನೇ ಬಾರಿಗೆ ಸಲ್ಲಿಸಿರುವ ಹೆಚ್ಚುವರಿ ಚಾರ್ಜ್ ಶೀಟ್ ನಲ್ಲಿ ಆರೋಪ ಗುರುತಿಸಲಾಗಿದೆ.

1967ರ ಯುಎಪಿಎ ಕಾಯ್ದೆಯಡಿ ದಾಖಲಾದ ಪ್ರಕರಣದಲ್ಲಿ ಆರು ಮಂದಿ ತಲೆಮರೆಸಿಕೊಂಡವರು ಸೇರಿ ಒಟ್ಟು 27 ಆರೋಪಿಗಳ ವಿರುದ್ಧ ಈವರೆಗೆ ಎನ್ ಐಎ ಚಾರ್ಜ್ ಹಾಕಲಾಗಿದೆ. ಇದೀಗ ಮೂವರು ನಾಪತ್ತೆಯಾದ ಆರೋಪಿಗಳು ಸಹಿತ ನಾಲ್ವರ ಮೇಲೆ ಆರೋಪ ಪಟ್ಟಿ ಸಲ್ಲಿಸಲಾಗಿದೆ.

ಅಬ್ದುಲ್ ನಾಸಿರ್, ನೌಶಾದ್ ಮತ್ತು ಅಬ್ದುಲ್ ರಹ್ಮಾನ್ ನಾಪತ್ತೆಯಾದವರು.

2020 ಜುಲೈ 26ರಂದು ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ಅವರನ್ನು ಹರಿತ ಆಯುಧಗಳಿಂದ ದುಷ್ಕರ್ಮಿಗಳು ಕೊಂದು ಹಾಕಿದ್ದರು. ರಾಜ್ಯಾದ್ಯಂತ ಕೊಲೆ ಪ್ರಕರಣ ತೀವ್ರ ಸದ್ದು ಮಾಡಿದ್ದರಿಂದ ರಾಜ್ಯ ಸರಕಾರ ಪ್ರಕರಣವನ್ನು ಎನ್‌ಐಎಗೆ ವಹಿಸಿತ್ತು.

You may also like