Home » Mangalore: ದ.ಕನ್ನಡ ಉದ್ವಿಗ್ನ; ಹಲವೆಡೆ ಬಸ್ಸುಗಳಿಗೆ ಕಲ್ಲು ತೂರಾಟ; ನಿಷೇಧಾಜ್ಞೆ ಜಾರಿ!

Mangalore: ದ.ಕನ್ನಡ ಉದ್ವಿಗ್ನ; ಹಲವೆಡೆ ಬಸ್ಸುಗಳಿಗೆ ಕಲ್ಲು ತೂರಾಟ; ನಿಷೇಧಾಜ್ಞೆ ಜಾರಿ!

0 comments

Mangalore: ಹಿಂದೂ ಕಾರ್ಯಕರ್ತ ಸುಹಾಸ್‌ ಶೆಟ್ಟಿ ಹತ್ಯೆ ಹಿನ್ನೆಲೆ ಜಿಲ್ಲೆ ಬಂದ್‌ಗೆ ವಿಹಿಂಪ ಕರೆ ನೀಡಿದೆ. ಮಂಗಳೂರಿನ ಕೆಲವೆಡೆ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆದಿದೆ. ಮೂರು ಬಸ್‌ಗಳಿಗೆ ಹಾನಿಯಾಗಿದೆ ಎನ್ನಲಾಗಿದೆ.

ಉದ್ರಿಕ್ತರಿಂದ ಮಂಗಳೂರಿನ ಹಂಪನಕಟ್ಟೆ ಬಳಿ ಬಸ್ಸುಗಳಿಗೆ ಕಲ್ಲು ತೂರಾಟ ನಡೆದಿದೆ.

ಮಂಗಳೂರು ನಗರ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಹೇರಲಾಗಿದೆ.

ಹಿಂದೂ ಕಾರ್ಯಕರ್ತ, ಫಾಸಿಲ್‌ ಕೊಲೆ ಆರೋಪಿ ಸುಹಾಸ್‌ ಶೆಟ್ಟಿ ಬಜ್ಪೆ ಅಂತಿಮ ಯಾತ್ರೆ ಬೆಳಗ್ಗೆ 8.30ಕ್ಕೆ ಎ.ಜೆ.ಹಾಸ್ಪಿಟಲ್‌ನಿಂದ ಹೊರಟು ನಂತೂರು-ಪಂಪ್‌ವೆಲ್‌ ಪಡೀಲ್‌ ಬಿಸಿರೋಡ್‌ ಬಂಟ್ವಾಳ ಮಾರ್ಗವಾಗಿ ಕಾರಿಂಜದ ತನ್ನ ಸ್ವಗೃಹದಲ್ಲಿ ಅಂತ್ಯ ಸಂಸ್ಕಾರ ಮಾಡಲಾಗುವುದು ಎಂದು ಹಿಂದೂ ಸಂಘಟನೆಗಳ ಪ್ರಮುಖರು ತಿಳಿಸಿರುವುದಾಗಿ ಮಾಧ್ಯಮವೊಂದು ಪ್ರಕಟ ಮಾಡಿದೆ.

You may also like