Home » Mangaluru: ವೈದ್ಯ ಕಾಲೇಜಿನ ಮಹಿಳಾ ಶೌಚಾಲಯದಲ್ಲಿ ಮೊಬೈಲ್ ಇಟ್ಟು ವಿಡಿಯೊ ಮಾಡಿದ ಅಪ್ರಾಪ್ತ: ಪ್ರಕರಣ ದಾಖಲು

Mangaluru: ವೈದ್ಯ ಕಾಲೇಜಿನ ಮಹಿಳಾ ಶೌಚಾಲಯದಲ್ಲಿ ಮೊಬೈಲ್ ಇಟ್ಟು ವಿಡಿಯೊ ಮಾಡಿದ ಅಪ್ರಾಪ್ತ: ಪ್ರಕರಣ ದಾಖಲು

0 comments
Mangaluru

Mangaluru: ನಗರದ ಒಂದು ವೈದ್ಯಕೀಯ ಕಾಲೇಜಿನ ಮಹಿಳೆಯರ ಶೌಚಾಲಯದಲ್ಲಿ ಮೊಬೈಲ್ ಅಡಗಿಸಿಟ್ಟು ವಿಡಿಯೊ ತೆಗೆದ ಬಾಲಕನೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ.ನಡೆಸುತ್ತಿದ್ದಾರೆ. ನಗ್ನ ವಿಡಿಯೋ ಚಿತ್ರೀಕರಿಸಿದ 17 ವರ್ಷದ ಬಾಲಕನನ್ನು ಬಾಲನ್ಯಾಯ ಮಂಡಳಿ ಮುಂದೆ ಹಾಜರುಪಡಿಸಿ ಮುಂದಿನ‌ ಕ್ರಮ ಕೈಗೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಮಹಿಳೆಯರ ನಗ್ನ ಚಿತ್ರ ಸೆರೆ ಹಿಡಿದ ಕುರಿತು ನಗರ ಮಂಗಳೂರು ಉತ್ತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಅಪ್ರಾಪ್ತ ಬಾಲಕನು ವೈದ್ಯಕೀಯ ಕಾಲೇಜಿನ ಮಹಿಳೆಯರ ಶೌಚಾಲಯದಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಮೊಬೈಲ್ ಆನ್ ಮಾಡಿ ಇಟ್ಟು ಬಂದಿದ್ದ. ಆದರೆ ಒಳಗೆ ಮೊಬೈಲ್ ಇಟ್ಟ ಕೆಲ ಸಮಯದ ನಂತರ ಮೊಬೈಲ್ ರಿಂಗ್ ಆಗಿದೆ. ಆಗ ಅನುಮಾನಗೊಂಡ.ಮಹಿಳೆಯರು ಭದ್ರತಾ ಸಿಬ್ಬಂದಿಯನ್ನು ಎಚ್ಚರಿಸಿದ್ದಾರೆ. ಭದ್ರತಾ ಸಿಬ್ಬಂದಿಗಳು ಶೌಚಾಲಯವನ್ನು ಪರಿಶಿಲಿಸಿದಾಗ ಅಲ್ಲಿ ಕ್ಯಾಮರಾ ಅನ್ ಮಾಡಿ ಇಟ್ಟ ಮೊಬೈಲ್ ಪತ್ತೆಯಾಗಿತ್ತು.

ಬಾಲಕನು ರೋಗಿಯ ಸೋಗಿನಲ್ಲಿ ಬಂದು ಬಾತ್ ರೂಮ್ ನಲ್ಲಿ ಮೊಬೈಲ್ ಇಟ್ಟಿದ್ದ. ಈಗ ಮೊಬೈಲನ್ನು ವಶಕ್ಕೆ ಪಡೆದುಕೊಂಡಿದ್ದೇವೆ. ಬಾಲಕನನ್ನು ಬಾಲ ನ್ಯಾಯ ಮಂಡಳಿ ಮುಂದೆ ಹಾಜರುಪಡಿಸಿ ಮುಂದಿನ ಕ್ರಮ ಕೈಗೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

You may also like

Leave a Comment