Mangaluru: 5ಜಿ ಜಾಮರ್ ಉಪಕರಣಗಳ ಮೇಲೆ ಉಪ್ಪು ಸುರಿದು ಹಾಳು ಮಾಡಲು ಯತ್ನ ಮಾಡಿದ ಒಂಭತ್ತು ಕೈದಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಜಿಲ್ಲಾ ಕಾರಾಗೃಹದಲ್ಲಿ ಈ ಘಟನೆ ನಡೆದಿದ್ದು, ಈ ಕುರಿತು ಬರ್ಕೆ ಠಾಣೆಯಲ್ಲಿ ಪ್ರಕರಣ ಇಂದು (ಮಾ.7) ದಾಖಲಾಗಿದೆ.
ಜಿಲ್ಲಾ ಕಾರಾಗೃಹದಲ್ಲಿ 2ಜಿ/3ಜಿ ಮಾದರಿಯ 5 ಮೊಬೈಲ್ ಜಾಮರ್ ಇತ್ತು. ಇದನ್ನು 5ಜಿ ಆಗಿ ಮೇಲ್ದರ್ಜೆಗೇರಿಸಲು ಟಿಐಸಿಎಲ್ ಸಂಸ್ಥೆಗೆ ಗುತ್ತಿಗೆ ನೀಡಲಾಗಿತ್ತು. 5ಜಿ ಜಾಮರ್ ಉಪಕರಣ ಅಳವಡಿಕೆ ಮಾಡಲಾಗಿತ್ತು. ಆದರೆ ಜೈಲಿನ ಎ ಮತ್ತು ಬಿ ವಿಭಾಗಗಳಲ್ಲಿ ಅಳವಡಿಸಲಾಗಿದ್ದ ಜಾಮರ್ ಉಪಕರಣಗಳನ್ನು ಉಪ್ಪು ಸುರಿದು ಕೈದಿಗಳು ಹಾಳು ಮಾಡಲು ಪ್ರಯತ್ನ ಮಾಡಲಾಗಿದೆ. ಈ ಕುರಿತು ಸಂಸ್ಥೆಯವರು ಕಾರಾಗೃಹ ಮತ್ತು ಸಾಧಾರಣ ಸೇವೆ ಇಲಾಖೆಯ ಮಹಾನಿರ್ದೇಶಕರಿಗೆ ವರದಿ ನೀಡಲಾಗಿದೆ.
ಬರ್ಕೆ ಠಾಣೆಯಲ್ಲಿ ದೂರು ದಾಖಲಾಗಿದೆ.
