3
Mangaluru: ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಈ ಘಟನೆ ಇಂದು ಬೆಳಕಿಗೆ ಬಂದಿದೆ. ಕೋಡಿಕಲ್ ನಿವಾಸಿ ನಿಖಿಲ್ ಪೂಜಾರಿ (30) ಮೃತ ಯುವಕ.
ನಿನ್ನೆ (ಜೂ.23) ರ ಸೋಮವಾರ ಬೆಳಗ್ಗೆ ನಿಖಿಲ್ ಪೂಜಾರಿ ಉಪಹಾರ ಸೇವನೆ ಮಾಡಿ ತನ್ನ ಕೋಣೆಗೆ ಹೋಗಿದ್ದ. ಸಂಜೆ ಮಲಗುವ ಅಭ್ಯಾಸ ಹೊಂದಿದ್ದ ಈತ. ಹಾಗಾಗಿ ಮನೆಯವರು ಹೆಚ್ಚು ಗಮನ ನೀಡಿಲ್ಲ. ಆದರೆ ಸಂಜೆ ಕಳೆದರೂ ಕೋಣೆಯಿಂದ ಬಾರದೇ ಇದ್ದುದನ್ನು ನೋಡಿ ಮನೆ ಮಂದಿ ಬಾಗಿಲು ಬಡಿದಿದ್ದಾರೆ. ಆದರೆ ಪ್ರತಿಕ್ರಿಯೆ ಬಂದಿಲ್ಲ.
ನಂತರ ಬಾಗಿಲಿನ ಎಡೆಯಿಂದ ರಾತ್ರಿ ಸುಮಾರು 8.15 ಕ್ಕೆ ನೋಡಿದಾಗ ಆತ್ಮಹತ್ಯೆ ಮಾಡಿರುವುದು ತಿಳಿದು ಬಂದಿದೆ. ಆರ್ಥಿಕ ಹೊರೆಯ ಕಾರಣದಿಂದ ಆತ್ಮಹತ್ಯೆ ಮಾಡಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ವಿವಿಧ ಆಪ್‌ಗಳಲ್ಲಿ ಸಾಲ ಪಡೆದಿದ್ದ ಈತ ನಂತರ ಹಿಂತಿರುಗಿಸಲು ಸಾಧ್ಯವಾಗಿರಲಿಲ್ಲ ಎನ್ನಲಾಗಿದೆ.
ಉರ್ವ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
