Bengaluru : ಬೆಂಗಳೂರಿನಲ್ಲಿ ತಡರಾತ್ರಿ ಭೀಕರ ಕೊಲೆ ನಡೆದಿದ್ದು ಕಾಂಗ್ರೆಸ್ ಶಾಸಕ ಎನ್ ಎ ಹ್ಯಾರಿಸ್ ಬಲಗೈ ಬಂಟನ ಒರ್ಬರ ಕೊಲೆಯಾಗಿದೆ.
ಹೌದು, ಶಾಸಕ ಎನ್ ಎ ಹ್ಯಾರಿಸ್ ಬಲಗೈ ಬಂಟ ಹೈದರ್ ಅಲಿ ಕೊಲೆಯಾದವರು. ಈತ ಕಾಂಗ್ರೆಸ್ ಮುಖಂಡ ಎಂದು ತಿಳಿದುಬಂದಿದೆ. ಬೆಂಗಳೂರಿನ ಗರುಡ ಮಾಲ್ ಬಳಿ ಬೈಕ್ ಅಡಗಟ್ಟಿ ಭೀಕರವಾಗಿ ಕೊಲೆ ಮಾಡಲಾಗಿದೆ. ಮದ್ಯ ರಾತ್ರಿ 1 ಗಂಟೆ ಸುಮಾರಿಗೆ ಲಾಂಗು ಮಚ್ಚುಗಳಿಂದ ಕೊಚ್ಚಿ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ.
ಆನೆಪಾಳ್ಯ ನೀಲಸಂದ್ರ ಸುತ್ತಮುತ್ತಲು ಆತ ಹೆಸರು ಮಾಡಿದ್ದ. ಅಪಾರ ಬೆಂಬಲಿಗರನ್ನು ಸಹ ಹೊಂದಿದ್ದ ಹೋದಲ್ಲಿ ಬಂದಲ್ಲಿ ಈತನನ್ನು ಬೆಂಬಲಿಗರು ಮೇರೆಸುತ್ತಿದ್ದರು ಎಂದು ತಿಳಿದುಬಂದಿದೆ ಹೈದರ್ ಅಲಿ ಇನ್ಸ್ಟಾಗ್ರಾಮ್ ಫ್ಯಾನ್ ಪೇಜ್ ಕೂಡ ಕ್ರಿಯೇಟ್ ಮಾಡಿದ್ದಾನೆ. ಅಷ್ಟರಮಟ್ಟಿಗೆ ಈತ ಜನರೊಂದಿಗೆ ಹಾಗೂ ರಾಜಕೀಯ ನಾಯಕರಿಗೆ ಒಡನಾಟ ಇಟ್ಟುಕೊಂಡಿದ್ದ ಎನ್ನಲಾಗಿದೆ.
ಇನ್ನು ಘಟನೆಯಲ್ಲಿ ಆತನ ಸ್ನೇಹಿತನಿಗೂ ಕೂಡ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆ ಸಂಬಂಧ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
