2
Mumbai: ಬಿಗ್‌ಬಾಸ್ ಒಟಿಟಿ-3 ರ ಸ್ಪರ್ಧಿ ಅದ್ನಾನ್ ಶೇಖ್ (Adnaan Shaikh) ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಸಹೋದರಿಯ ಮೇಲೆ ಹಿಗ್ಗಾಮುಗ್ಗ ಥಳಿಸಿದ ಆರೋಪದ ಮೇರೆಗೆ ಯೂಟ್ಯೂಬರ್ ವಿರುದ್ಧ ಕೇಸು ದಾಖಲಾಗಿದೆ.
ಅದ್ನಾನ್ ಶೇಖ್ ಸಹೋದರಿ ಆಯೇಷಾ ಅವರು ಗೋರೆಗಾಂವ್‌ನ ಬಂಗೂರ್ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಇತ್ತೀಚೆಗೆ ತನ್ನ ಮದುವೆಯ ಕಾರಣದಿಂದ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿದ್ದ ಅದ್ನಾನ್, ತನ್ನ ಬಹುಕಾಲದ ಗೆಳತಿ ರಿದ್ಧಿಯನ್ನು ಮದುವೆಯಾಗಿದ್ದು, ಮದುವೆ ಬಳಿಕ ಇಸ್ಲಾಂಗೆ ಮತಾಂತರಗೊಂಡ ರಿದ್ಧಿ, ಇದೀಗ ತನ್ನ ಹೆಸರನ್ನು ಆಯೇಷಾ ಶೇಕ್ ಎಂದು ಬದಲಾಯಿಸಿದ್ದಾಳೆ.
