Home » Mundaragi: ನಡು ರಸ್ತೆಯಲ್ಲೇ ಹೆಂಡತಿಗೆ ಕಂದಿಲಿ ಆಯುಧದಿಂದ ಮಾರಣಾಂತಿಕ ಹಲ್ಲೆ ಮಾಡಿದ ಪತಿ; ಬೆಚ್ಚಿ ಬಿದ್ದ ಸಾರ್ವಜನಿಕರು

Mundaragi: ನಡು ರಸ್ತೆಯಲ್ಲೇ ಹೆಂಡತಿಗೆ ಕಂದಿಲಿ ಆಯುಧದಿಂದ ಮಾರಣಾಂತಿಕ ಹಲ್ಲೆ ಮಾಡಿದ ಪತಿ; ಬೆಚ್ಚಿ ಬಿದ್ದ ಸಾರ್ವಜನಿಕರು

1 comment
Mundaragi

Mundaragi: ಗಂಡನೋರ್ವ ತನ್ನ ಹೆಂಡತಿಗೆ ಕಂದಿಲಿ ಎಂಬ ಕಬ್ಬಿಣದ ಆಯುಧದಿಂದ ಹೊಡೆದು ಹಲ್ಲೆ ಮಾಡಿರುವ ಘಟನೆಯೊಂದು ಗದಗ ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ನಡೆದಿದೆ.

ಇದನ್ನೂ ಓದಿ: 2nd PUC Result: ಸೂಸೈಡ್‌ ಎಂದು ಬರೆದು ಟ್ವಿಟ್ಟರ್‌ನಲ್ಲಿ ಪೊಲೀಸರಿಗೆ ಟ್ಯಾಗ್‌ ಮಾಡಿದ ಫೇಲ್‌ ಆದ ವಿದ್ಯಾರ್ಥಿ

ರಕ್ತದ ಮಡುವಿನಲ್ಲಿ ಆಕೆ ಬಿದ್ದು ಒದ್ದಾಡಿದ್ದು, ಇದನ್ನು ನೋಡಿ ಸಾರ್ವಜನಿಕರೇ ಹೆದರಿ ಹೋಗಿದ್ದಾರೆ. ರಸ್ತೆಯಲ್ಲಿ ರಕ್ತದ ಮಡುವಿನಲ್ಲಿದ್ದ ಮಹಿಳೆಯ ಪಕ್ಕದಲ್ಲೇ ಗಂಡ ಕಂದಿಲಿ ಹಿಡಿದು ನಿಂತಿರುವ ಘಟನೆ ನಡೆದಿದೆ.

ಇದನ್ನೂ ಓದಿ: Delhi: ಒಳ ಉಡುಪು ಕೊಳ್ಳಲು ಬಂದು ಅಂಗಡಿಯವನ ಮುಂದೆಯೇ ಬಟ್ಟೆ ಬಿಚ್ಚಿದ ಯುವತಿ !! ವಿಡಿಯೋ ವೈರಲ್

ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ಪೋಸ್ಟ್‌ ಆಫೀಸಿನಲ್ಲಿ ಪೋಸ್ಟ್‌ ವುಮೆನ್‌ ಆಗಿ ಕೆಲಸ ಮಾಡುತ್ತಿದ್ದ ಗೀತಾ ಬೇಲೂರಪ್ಪ ಪೂಜಾರ ಹಲ್ಲೆಗೊಳಗಾದ ಮಹಿಳೆ. ಈಕೆಯ ಗಂಡ ಬೇಲೂರಪ್ಪ ಹುಚ್ಚಪ್ಪ ಪೂಜಾರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸ್ಥಳಕ್ಕೆ ಬಂದ ಪೊಲೀಸರು ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹಿಳೆಯನ್ನು ಪೊಲೀಸ್‌ ಜೀಪಿನಲ್ಲಿ ತಾಲೂಕು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಮಹಿಳೆ ಗೀತಾ ಮತ್ತು ಆಕೆಯ ಗಂಡನ ನಡುವಿನ ಕುಟುಂಬ ಕಲಹವೇ ಈ ದುರ್ಘಟನೆಗೆ ಕಾರಣ ಎನ್ನಲಾಗುತ್ತಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

You may also like

Leave a Comment