Home » Murder: ಕಾಫಿ ಎಸ್ಟೇಟ್ ನಲ್ಲಿ ಸುಟ್ಟು ಕರಕಲಾದ ಮೃತ ದೇಹ ಪತ್ತೆ: ಶವ ಯಾರದ್ದು?

Murder: ಕಾಫಿ ಎಸ್ಟೇಟ್ ನಲ್ಲಿ ಸುಟ್ಟು ಕರಕಲಾದ ಮೃತ ದೇಹ ಪತ್ತೆ: ಶವ ಯಾರದ್ದು?

0 comments

Murder: ಮಡಿಕೇರಿಯ(Madikeri) ಸುಂಟಿಕೊಪ್ಪದ ಪನ್ಯ ಗ್ರಾಮ ಮಾರಿಗುಡಿ ಸಮೀಪದ ಕಾಫಿ ತೋಟವೊಂದರಲ್ಲಿ( Coffee estate) ಸುಟ್ಟು ಕರಕಲಾಗಿರುವ ಮೃತದೇಹ(Dead body) ಮತ್ತು ಅಂಗಾಂಗಗಳು ಪತ್ತೆಯಾಗಿದೆ.

ಇದು ಅಪರಿಚಿತ ಪುರುಷನ ಶವವಾಗಿದ್ದು, 45 ರಿಂದ 50 ವರ್ಷದ ವ್ಯಕ್ತಿ ಎಂದು ಅಂದಾಜಿಸಲಾಗಿದೆ. ಕರಕಲಾದ ದೇಹದ ಪಕ್ಕದಲ್ಲಿ ಕಾಲು ಮತ್ತಿತರ ಅಂಗಗಳು ಗೋಚರಿಸಿದೆ. ತೋಟದ ಮಾಲೀಕರು ಮಾಹಿತಿ ನೀಡಿದ ಹಿನ್ನೆಲೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸುಮಾರು 4 ದಿನಗಳ ಹಿಂದೆ ದೇಹವನ್ನು ಸುಟ್ಟಿರುವ ಶಂಕೆ ಇದ್ದು, ಇದೊಂದು ಕೊಲೆ ಪ್ರಕರಣವಾಗಿದೆ ಎಂದು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದ್ದಾರೆ. ಡಿವೈಎಸ್‌ಪಿ ಗಂಗಾಧರಪ್ಪ, ಕುಶಾಲನಗರ ಗ್ರಾಮಾಂತರ ವೃತ್ತ ನಿರೀಕ್ಷಕ ರಾಜೇಶ್ ಕೋಟ್ಯಾನ್, ಸುಂಟಿಕೊಪ್ಪ ಠಾಣಾಧಿಕಾರಿ ಚಂದ್ರಶೇಖರ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.

You may also like

Leave a Comment