Home » Murder Case: ನಿವೃತ್ತ ಡಿಜಿ,ಐಜಿಪಿ ಓಂ ಪ್ರಕಾಶ್‌ ಹತ್ಯೆಗೆ ಕಾರಣ ಬಹಿರಂಗ

Murder Case: ನಿವೃತ್ತ ಡಿಜಿ,ಐಜಿಪಿ ಓಂ ಪ್ರಕಾಶ್‌ ಹತ್ಯೆಗೆ ಕಾರಣ ಬಹಿರಂಗ

0 comments

Murder Case: ನಿವೃತ್ತ ಡಿಜಿ, ಐಜಿಪಿ ಓಂ ಪ್ರಕಾಶ್‌ ಕೊಲೆ ಪ್ರಕರಣದ ತನಿಖೆ ಕೊನೆ ಹಂತ ತಲುಪಿದೆ. ತನಿಖೆ ಸಮಯದಲ್ಲಿ ಕೊಲೆಗೆ ಪ್ರಮುಖ ಕಾರಣಗಳನ್ನು ಪತ್ತೆ ಮಾಡಲಾಗಿದೆ. ಕುಟುಂಬದ ಬಗ್ಗೆ ತೋರಿದ ನಿರ್ಲಕ್ಷ್ಯ, ತನ್ನ ಕುಟುಂಬಕ್ಕಿಂತಲೂ ತಂಗಿ ಕುಟುಂಬಕ್ಕೆ ಓಂ ಪ್ರಕಾಶ್‌ ಹೆಚ್ಚು ಒತ್ತು ಕೊಡುತ್ತಿದ್ದುದ್ದು, ಮಗಳಿಗೆ ಮದುವೆ ಮಾಡ್ತಿಲ್ಲ ಹೀಗೆ ಹಲವು ಕಾರಣಗಳು ಬಹಿರಂಗಗೊಂಡಿದೆ.

ಪತಿ ಓಂಪ್ರಕಾಶ್‌ ಅವರನ್ನು ಪತ್ನಿ ಪಲ್ಲವಿ ಕೌಟುಂಬಿಕ ಕಾರಣಗಳಿಂದ ಕೊಂದಿದ್ದಾರೆ. ಈ ಕುರಿತು ಸಿಸಿಬಿ ತನಿಖೆ ಸಂದರ್ಭ 9 ಕಾರಣಗಳು ಪತ್ತೆಯಾಗಿದೆ.

ತನ್ನ ಬಗ್ಗೆ ವೈಯಕ್ತಿಕವಾಗಿ ಗಮನ ಹರಿಸಿಲ್ಲ, ಮಗಳಿಗೆ ಮದುವೆ ಮಾಡಿಲ್ಲ, ತನ್ನ ತಂಗಿ ಕುಟುಂಬದ ಕಡೆಗೆ ಗಮನವಹಿಸುವಿಕೆ, ಮನೆಯಲ್ಲಿ ಸಮಸ್ಯೆಗಳಾದಾಗ ನೇರವಾಗಿ ಸಹೋದರಿ ಮನೆಗೆ ಹೋಗುತ್ತಿದ್ದುದ್ದು, ಮಗಳ ಕೈಗೆ ಖರ್ಚಿಗೆ ದುಡ್ಡು ಕೊಡ್ತಿರಲಿಲ್ಲ, ಹಣದ ವ್ಯವಹಾರವನ್ನು ಓಂ ಪ್ರಕಾಶ್‌ ಒಬ್ಬರೇ ನೋಡುತ್ತಿದ್ದರು, ಕೆಲ ಬಾರಿ ಜಗಳ ಮಾಡಿ ಮನೆ ಬಿಟ್ಟು ಹೋಗಿದ್ದ ಪಲ್ಲವಿ, ಓಂ ಪ್ರಕಾಶ್‌ ತನ್ನನ್ನು ಕೊಲೆ ಮಾಡಬಹುದು ಎಂದು ಯೋಚನೆ ಮಾಡುತ್ತಿದ್ದ ಪಲ್ಲವಿ, ತಾನು ಕೊಲೆಯಾಗುವ ಬದಲು ಅವರನ್ನೇ ಕೊಲೆ ಮಾಡಲು ನಿರ್ಧಾರ ಮಾಡಿದ ಪಲ್ಲವಿ.

ಮೇಲೆ ತಿಳಿಸಿದ ಎಲ್ಲಾ ಕಾರಣಗಳಿಂದ ಪಲ್ಲವಿಗೆ ತನ್ನ ಗಂಡನ ಮೇಲೆ ದ್ವೇಷ ಉಂಟಾಗಿದ್ದು, ಮಾನಸಿಕವಾಗಿ ಡಿಸ್ಟರ್ಬ್‌ ಆಗಿದ್ದರು. ನಂತರ ಓಂಪ್ರಕಾಶ್‌ರನ್ನು ಪತ್ನಿ ಪಲ್ಲವಿ ಭೀಕರವಾಗಿ ಹತ್ಯೆ ಮಾಡಿದ್ದಾರೆ ಎಂದು ಸಿಸಿಬಿ ಪೊಲೀಸರ ತನಿಖೆ ಸಂದರ್ಭ ಪತ್ತೆಯಾಗಿದೆ.

You may also like