Home » Corporation : ಪುರಸಭೆಯಲ್ಲಿ ಮಹಿಳಾ ಸದಸ್ಯರ ನಡುವೆ ಪರಸ್ಪರ ನಿಂದನೆ – ಓರ್ವ ಸದಸ್ಯರ ಕುತ್ತಿಗೆಗೆ ಗಾಯ

Corporation : ಪುರಸಭೆಯಲ್ಲಿ ಮಹಿಳಾ ಸದಸ್ಯರ ನಡುವೆ ಪರಸ್ಪರ ನಿಂದನೆ – ಓರ್ವ ಸದಸ್ಯರ ಕುತ್ತಿಗೆಗೆ ಗಾಯ

0 comments

Corporation :ವಿರಾಜಪೇಟೆ(Viraj Pete) ಪುರಸಭೆಯಲ್ಲಿ 2 ಜವಾಬ್ದಾರಿಯುತ ಪುರದ ಸೇವೆ ಮಾಡಲು ಬಂದ ಮಹಿಳಾ ಸದಸ್ಯರು(Members)ಹೊಡೆದಾಡ್ಕೊಂಡಿದ್ದಾರೆ. ಪುರಸಭೆಯ ಸದಸ್ಯರು ಆಸೀನರಾಗುವ ಸಭಾ ಕೊಠಡಿಯೊಳಗೆ ಕಾಂಗ್ರೆಸ್ (Congress)ಪಕ್ಷದ ಸ್ಥಳೀಯ ಮುಖಂಡ ಹಾಗು ವ್ಯಾಪಾರಿಯೊಬ್ಬರು ಚರ್ಚಿಸುತ್ತಿದ್ದದ್ದನ್ನು ಗಮನಿಸಿದ ಮತ್ತೊಂದು ಮಹಿಳಾ ಸದಸ್ಯ ಮೊಬೈಲ್ ನಲ್ಲಿ ಸೆರೆಹಿಡಿಯಲು ಹೋದಾಗ ಪುರದ ಪ್ರಥಮ ಪ್ರಜೆ ಆಕೆಯ ಕುತ್ತಿಗೆಯನ್ನು ಹಿಡಿದು ಕೈಯ ಉಗುರಿನಿಂದ ಗಾಯಗೊಳಿಸಿದ್ದಾರೆ ಎಂದು ಹೇಳಲಾಗಿದೆ. ಈ ಘಟನೆಯ ಸುದ್ದಿ ಅಲ್ಲಿ ಇದ್ದ ಪ್ರತ್ಯಕ್ಷ ದರ್ಶಿಗಳು ಖಚಿತಪಡಿಸಿದ್ದಾರೆ.

ಇಬ್ಬರ ನಡುವೆ ಸಂಸ್ಕಾರ ರಹಿತ ಭಾಷೆಗಳ, ವೈಯಕ್ತಿಕ ವಿಚಾರಗಳ ಪರಸ್ಪರ ನಿಂದನೆ ಕೂಡ ಇತರ ಕೆಲವು ಸದಸ್ಯರ ಮುಂದೆ ನಡೆದು ನಂತರ, ಸ್ವಲ್ಪ ಸಮಯದ ಹಿಂದೆ ಅಲ್ಲೇ ನಡೆದ ಶಾಸಕರ ಕಾರ್ಯಕ್ರಮಕ್ಕೆ ಆಗಮಿಸಿದ ಪೊಲೀಸರು ಸಮಾಧಾನಪಡಿಸಿ ಇಬ್ಬರನ್ನು ಕಳಿಸಿರುವ ಘಟನೆ ಎ.6ರಂದು ನಡೆದಿದೆ ಎಂದು ಹೇಳಲಾಗಿದೆ.

ಈ ಘಟನೆಯ ಬಗೆ ಮೊಬೈಲ್ ನಲ್ಲಿ ವಿಡಿಯೋ ಚಿತ್ರೀಕರಣ ವಾಗಿದ್ದು ಇನ್ನಷ್ಟೇ ಇದು ಬಿಡುಗಡೆಗೊಳ್ಳಲಿದೆ ಎಂಬ ಮಾಹಿತಿಗೆ ಲಭ್ಯವಾಗಿದೆ.. ಜಿಲ್ಲೆಯಲ್ಲಿ ಒಂದು ಕಡೆ ಬಿಜೆಪಿಯ ಕಾರ್ಯಕರ್ತನ ಆತ್ಮಹತ್ಯೆ ಪ್ರಕರಣದ ಘಟನೆ ನಡೆದಿದ್ದು ಮತ್ತೊಂದೆಡೆ ಅದೇ ಪಕ್ಷದ ಮಹಿಳಾ ಸದಸ್ಯ ಮೇಲೆ ಹಲ್ಲೆಗೆ ಯತ್ನಿಸಿರುವ ಘಟನೆ ಕೂಡ ನೆನ್ನೆ ನಡೆದಿದೆ ಎಂದು ಬಲ್ಲಮೂಲಗಳಿಂದ ತಿಳಿದು ಬಂದಿದೆ.

You may also like