Home » New Delhi: ಹೃದಯಾಘಾತಕ್ಕೆ 25ರ ವಿವಾಹಿತ ಬಲಿ – 24ಯೊಳಗೆ ಹೆಂಡತಿಯೂ ಸಾವಿಗೆ ಶರಣು !!

New Delhi: ಹೃದಯಾಘಾತಕ್ಕೆ 25ರ ವಿವಾಹಿತ ಬಲಿ – 24ಯೊಳಗೆ ಹೆಂಡತಿಯೂ ಸಾವಿಗೆ ಶರಣು !!

0 comments
New Delhi

New Delhi: ಹೃದಯಘಾತ ಮೊದಲೆಲ್ಲ ಪ್ರಾಯ ಆದವರಿಗೆ ಬಂದೆರಗುತ್ತಿತ್ತು. ಆದರೆ ಇಂದು ಚಿಕ್ಕವರು, ದೊಡ್ಡವರು ಎಂದು ನೋಡದೆ ಎಲ್ಲರಿಗೂ ಇದು ಅಟ್ಯಾಕ್ ಆಗುತ್ತಿದೆ. ಹಾಗೆ ನೋಡಿದರೆ ಇಂದು ಯುವ ಜನರಿಗೇ ಹೆಚ್ಚು ಹೃದಯಾಘಾತ ಆಗುತ್ತಿದೆ ಎನ್ನಬಹುದು. ಅಂತೆಯೇ ಇದೀಗ ದೆಹಲಿಯಲ್ಲೊಂದು(New Delhi)ಮನಮಿಡಿಯುವ ಘಟನೆ ಬೆಳಕಿಗೆ ಬಂದಿದ್ದು ಹೃದಯಾಘಾತಕ್ಕೆ 25 ವರ್ಷದ ವಿವಾಹಿತ ಸಾವನ್ನಪ್ಪಿದ್ದಾನೆ. ಈ ವಿಚಾರ ತಿಳಿದು ಹೆಂಡತಿಯೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಇದನ್ನೂ ಓದಿ: Rahul Gandhi: ಲೋಕಸಭಾ ಚುನಾವಣೆ- ಕರ್ನಾಟಕದಿಂದಲೇ ರಾಹುಲ್ ಗಾಂಧಿ ಕಣಕ್ಕೆ?

ಹೌದು, ದೆಹಲಿಯ ಮೃಗಾಲಯಕ್ಕೆ ಭೇಟಿ ನೀಡಿದ್ದ ಗಾಜಿಯಾಬಾದ್‌ನ ನವಜೋಡಿಯೊಂದು ದಾರುಣ ಅಂತ್ಯ ಕಂಡಿರುವ ಘಟನೆ ನಡೆದಿದೆ. 25 ರ ಹರೆಯದ ಅಭಿಷೇಕ್‌ ಅಹ್ಲುವಾಲಿ ಹೃದಯಾಘಾತದಿಂದ(Hart attack)ಮೃತಪಟ್ಟ. ಇದಾದ 24 ಗಂಟೆಗಳ ಬಳಿಕ ಪತಿ ಸಾವಿನ ಆಘಾತದಿಂದ ಅಂಜಲಿ, ಏಳನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಅಂದಹಾಗೆ ಕಳೆದ ವರ್ಷದ ನವೆಂಬರ್‌ 30 ರಂದು ಅಭಿಷೇಕ್ ಮತ್ತು ಅಂಜಲಿ ವಿವಾಹವಾಗಿದ್ದರು. ಮದುಯಾಗಿ ಇನ್ನು 4ತಿಂಗಳು ಕಳೆದದ್ದು ಅಷ್ಟೇ. ಹೀಗಾಗಿ ಸೋಮವಾರ ಇಬ್ಬರೂ ದೆಹಲಿ ಮೃಗಾಲಯಕ್ಕೆ ಭೇಟಿ ನೀಡಿದ್ದರು. ಅಲ್ಲಿ ಅಭಿಷೇಕ್‌ಗೆ ಎದೆನೋವು ಕಾಣಿಸಿಕೊಂಡಿತು. ಅಂಜಲಿ ತನ್ನ ಸ್ನೇಹಿತರನ್ನು ಗಂಡನನ್ನು ಸಫ್ದರ್‌ಜಂಗ್ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ವೈದ್ಯರು ಆತ ಹೃದಯಾಘಾತಕ್ಕೆ ಬಲಿಯಾಗಿರುವುದಾಗಿ ಹೇಳಿದ್ದಾರೆ. ಪತಿಯ ಮರಣದ ಆಘಾತ ಸಹಿಸಲಾಗದೆ ಅಂಜಲಿ ಏಳನೇ ಮಹಡಿಯ ಬಾಲ್ಕನಿಗೆ ಧಾವಿಸಿ ಜಿಗಿದಿದ್ದಾಳೆ.

You may also like

Leave a Comment