New Delhi: 42 ವರ್ಷದ ಬಜಾಜ್ ಫೈನಾನ್ಸ್‌ನ ಉದ್ಯೋಗಿಯೋರ್ವರು ತನ್ನ ಕೆಲಸದ ಒತ್ತಡ, ಮಾನಸಿಕ ಹಿಂಸೆಯಿಂದ ಬೇಸತ್ತುಗೊಂಡು ಸೆ.29 ರಂದು ಭಾನುವಾರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಇವರು ತನ್ನ ಪತ್ನಿ ಇಬ್ಬರು ಮಕ್ಕಳನ್ನು ರೂಮ್‌ನಲ್ಲಿ ಲಾಕ್ ಮಾಡಿದ್ದರು. ತರುಣ್ ಸಕ್ಸೇನಾ ಎಂಬುವವರು ಡೆತ್‌ನೋಟ್ ಬರೆದಿದ್ದು, ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ಝಾನ್ಸಿಯಲ್ಲಿ.
ಬಜಾನ್ ಫೈನಾನ್ಸ್‌ನಲ್ಲಿ ಏರಿಯಾ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ತರುಣ್ ಅವರು ಫೈನಾನ್ಸ್ ಸಾಲಗಳ ಇಎಂಐ ಸಂಗ್ರಹ ಮಾಡುವ ಕೆಲಸ ಮಾಡುತ್ತಿದ್ದರು. ಹಗಲು ರಾತ್ರಿ ಬಹಳ ನಿಷ್ಠೆಯಿಂದ ತಮ್ಮ ಕೆಲಸ ಮಾಡಿದರೂ ಒತ್ತಡಕ್ಕೆ ಒಳಗಾಗಿ ಸೂಸೈಡ್ ಮಾಡಿಕೊಂಡಿದ್ದಾರೆ. ತಮ್ಮ ಕೆಲಸದ ಕಾರಣದಿಂದ ಸತತವಾಗಿ 45 ದಿನಗಳಿಂದ ಸರಿಯಾಗಿ ನಿದ್ದೆ ಮಾಡದೇ, ಊಟ ಮಾಡದೇ ತೀವ್ರ ಒತ್ತಡಕ್ಕೆ ಒಳಗಾಗಿದ್ದೆ. ನನ್ನನ್ನು ಕ್ಷಮಿಸಿ ತಮ್ಮ ಕುಟುಂಬದವರಲ್ಲಿ ಕೇಳಿಕೊಂಡಿರುವುದಾಗಿ ಡೆತ್‌ನೋಟ್‌ನಲ್ಲಿ ಬರೆಯಲಾಗಿದೆ.
ನಾನು ನನ್ನ ಭವಿಷ್ಯ ಬಗ್ಗೆ ತುಂಬಾ ಚಿಂತನೆಗೊಳಗಾಗಿದ್ದು, ಯೋಚಿಸುವ ಸಾಮರ್ಥ್ಯವನ್ನು ಕಳೆದುಕೊಂಡಿದ್ದೇನೆ. ನಾನು ಹೋಗುತ್ತಿದ್ದೇನೆ. ಅಪ್ಪ ಮತ್ತು ಅಮ್ಮ.. ನಾನು ಇದುವರೆಗೂ ನಿಮ್ಮನ್ನು ಏನನ್ನೂ ಕೇಳಿಲ್ಲ. ಆದರೆ ಈಗ ಕೇಳುತ್ತಿದ್ದೇನೆ. ದಯವಿಟ್ಟು 2ನೇ ಮಹಡಿಯನ್ನು ನಿರ್ಮಿಸಿಕೊಡಿ. ಇದರಿಂದ ನನ್ನ ಪತ್ನಿ ಮತ್ತು ನನ್ನ ಮಕ್ಕಳು ಅಲ್ಲಿ ಉಳಿದುಕೊಳ್ಳಲು ನೆರವಾಗುತ್ತದೆ ಎಂದು ಡೆತ್‌ನೋಟ್ ಬರೆದಿದ್ದಾರೆ. ಇವರು ಬರೆದ ಐದು ಪುಟಗಳ ಡೆತ್‌ನೋಟಲ್ಲಿ ಅಧಿಕಾರಿಗಳು ನೀಡಿದ್ದ ಮಾನಸಿಕ ಹಿಂಸೆಯ ಕುರಿತು ತಿಳಿಸಲಾಗಿದೆ. ಎರಡು ತಿಂಗಳಿನಿಂದ ಟಾರ್ಗೆಟ್ ರೀಚ್ ಆಗಲು ಒತ್ತಡ ಹೆಚ್ಚಿತ್ತು. ಗುರಿ ತಲುಪದಿದ್ದರೆ, ಸಂಬಳ ಕಟ್ ಮಾಡುವುದಾಗಿ ಬೆದರಿಕೆ ಹಾಕಿದ್ದರು. ನನ್ನ ಸಾವಿಗೆ ಕಂಪನಿಯ ಇಬ್ಬರು ಅಧಿಕಾರಿಗಳೇ ನೇರ ಕಾರಣ ಎಂದು ಡೆತ್‌ನೋಟಲ್ಲಿ ಉಲ್ಲೇಖ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕೆಲಸದ ಒತ್ತಡದಿಂದ ತರುಣ್ ಸೇರಿ ಮೂವರು ಸಾವಿಗೀಡಾಗಿರುವ ಘಟನೆ ಕುರಿತು ಈಗಾಗಲೇ ವರದಿಯಾಗಿದೆ. ಅಕೌಂಟಿಂಗ್ ಸಂಸ್ಥೆ ಅರ್ನ್ಸ್ಟ್ ಅಂಡ್ ಯಂಗ್ (ಇವೈ) ನ ಕಾರ್ಮಿಕ, 26 ವರ್ಷದ ಅನ್ನಾ ಸೆಬಾಸ್ಟಿಯನ್ ಇತ್ತೀಚೆಗಷ್ಟೇ ಆತ್ಮಹತ್ಯೆ ಮಾಡಿಕೊಂಡಿದ್ದ. ಹೆಚ್‌ಡಿಎಫ್‌ಸಿ ಬ್ಯಾಂಕ್ ಉದ್ಯೋಗಿಯೊಬ್ಬರು ಕಚೇರಿಯಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ವಿಷಯ ಬೆಳಕಿಗೆ ಬಂದಿತ್ತು. ಇದು ಕೂಡಾ ಅತಿಯಾದ ಕೆಲಸದ ಒತ್ತಡ ಎನ್ನಲಾಗಿತ್ತು.
