Home » Tumkur: ನವಜಾತ ಹೆಣ್ಣು ಶಿಶು ಪೊದೆಯ ಬಳಿ ಪತ್ತೆ!

Tumkur: ನವಜಾತ ಹೆಣ್ಣು ಶಿಶು ಪೊದೆಯ ಬಳಿ ಪತ್ತೆ!

0 comments

Tumkur: ನವಜಾತ ಶಿಶುವೊಂದು ನಿರ್ಜನ ಪ್ರದೇಶದ ಪೊದೆಯ ಬಳಿ ಅನಾಥವಾಗಿರುವುದನ್ನು ಕಂಡ ಸ್ಥಳೀಯರು ಮಗುವನ್ನು ರಕ್ಷಣೆ ಮಾಡಿರುವ ಘಟನೆ ತುಮಕೂರು ಜಿಲ್ಲೆ ಸಿರಾ ತಾಲ್ಲೂಕಿನ ಮಾಟನಹಳ್ಳಿಯಲ್ಲಿ ನಡೆದಿದೆ.

ಇಂದು (ಮಂಗಳವಾರ) ಬೆಳಿಗ್ಗೆ ನಿರ್ಜನ ಪ್ರದೇಶದಲ್ಲಿ ಮಗುವೊಂದು ಅಳುತ್ತಿರುವ ಶಬ್ದ ಕೇಳಿ ಸ್ಥಳಿಯರು ಹೋಗಿ ನೋಡಿದಾದ ಪೊದೆಯ ಒಳಗೆ ಹೆಣ್ಣು ಶಿಶುವು ಇರುವುದು ಕಂಡು ಬಂದಿದೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿದ್ದು, ಮಗುವನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆಂದು ತುಮಕೂರು ಜಿಲ್ಲಾಸ್ಪತ್ರೆಗೆ ರವಾನೆ ಮಾಡಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹೀನ ಕೃತ್ಯ ಎಸಗಿದವರ ಪತ್ತೆಗೆ ಮುಂದಾಗಿದ್ದಾರೆ.

You may also like