Operation Sindoor: ಅಪರೇಷನ್ ಸಿಂಧೂರ ಕಾರ್ಯ ಮುಂದುವರೆದಿದೆ. ಇತ್ತ ಕರ್ನಾಟಕದಲ್ಲಿ ಕೆಲವೊಂದು ಪಾಕ್ ಪ್ರೇಮಿಗಳು ತಮ್ಮ ಪಾಕ್ ಪ್ರೇಮ ಪ್ರದರ್ಶನ ಮಾಡಿದ್ದಾರೆ. ವಿಜಯಪುರದ ಅಲ್ ಅಮೀನ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿ ಪಾಕಿಸ್ತಾನದ ಜನರ ಪರ ಹಾಗೂ ಅವರ ಸುರಕ್ಷತೆ ಕುರಿತು ಸೋಷಿಯಲ್ ಮೀಡಿಯಾದಲ್ಲಿ ದೇಶ ವಿರೋಧಿ ಪೋಸ್ಟ್ ಹಂಚಿಕೊಂಡಿದ್ದಾಳೆ. ಇದು ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.
ವಿಜಯಪುರದ ಅಲ್ ಅಮೀನ್ ಮೆಡಿಕಲ್ ಕಾಲೇಜಿನ ತಷಾವುದ್ದ ಫಾರೂಖಿ ಶೇಖ್ ಎಂಬ ವಿದ್ಯಾರ್ಥಿನಿ ಪಾಕಿಸ್ತಾನದ ಪರ ಪೋಸ್ಟ್ ಬರೆದಿದ್ದಾರೆ.
ವಿದ್ಯಾರ್ಥಿನಿ ತಷಾವುದ್ದ ಪೋಸ್ಟ್ನಲ್ಲಿ ಬರೆದಿರುವುದೇನು?
‘@hoodyyyyyyy’ ಎಂಬ ಹೆಸರಿನ ಖಾತೆಯಲ್ಲಿ “ನನ್ನ ಪಾಕಿಸ್ತಾನಿ ಸ್ನೇಹಿತರಿಗೆ, ಐಒಜೆಕೆ, ಎಜೆಕೆ ಜನರು ಸರ್ಕಾರಿ ಮಿಲಿಟರಿ ಸ್ಥಳಗಳಿಗೆ ಹೋಗಬೇಡಿ. ಗಡಿಯಿಂದ 200 ಕಿಲೋ ಮೀಟರ್ ಹೋಗಬೇಡಿ. ಅಲ್ಲಾ ಪಾಕಿಸ್ತಾನ ಹಾಗೂ ನಮ್ಮೆಲ್ಲರನ್ನೂ ಭಾರತದಿಂದ ರಕ್ಷಿಸಲಿ ಅಮೀನ್#sos” ಎಂದು ದೇಶ ವಿರೋಧಿ ಪೋಸ್ಟ್ ಹಂಚಿಕೊಂಡಿದ್ದಾಳೆ. ತನ್ನ ವಾಟ್ಸಾಪ್ ಸ್ಟೇಟಸ್‌ಗಳಲ್ಲಿ ಕೂಡ ಪೋಸ್ಟ್ ಹಾಕಿದ್ದಾಳೆ.
ಈಕೆಯ ಈ ಪೋಸ್ಟ್ ವೈರಲ್ ಬೆನ್ನಲ್ಲೇ ಆಕೆಯ ವಿರುದ್ಧ ಕಾನೂನು ಕ್ರಮಕ್ಕೆ ಹಿಂದೂ ಪರ ಸಂಘಟನೆಗಳು ಒತ್ತಾಯ ಮಾಡಿದೆ. ನಂತರ ಪಿಎಸ್‌ಐ ವಿನೋದ ದೊಡಮನಿಯಿಂದ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ದೂರು ದಾಖಲಾಗಿದೆ. ಈಕೆಯ ಮೇಲೆ ಬಿಎನ್‌ಎಸ್ 152.197.3(5) ಅಡಿ ದೂರು ದಾಖಲಾಗಿದೆ.
ದೂರು ದಾಖಲಾಗುತ್ತಿದ್ದಂತೆ ತಷಾವುದ್ದ ಯೂ ಟರ್ನ್ ಹೊಡೆದಿದ್ದಾಳೆ. ” ಇನ್‌ಸ್ಟಾಗ್ರಾಂ ಖಾತೆಯಲ್ಲಿನ ನನ್ನ ಕಮೆಂಟ್ ಕೆಲವರನ್ನು ನೋಯಿಸಿದೆ. ಮನನೊಂದಿರುವ ಎಲ್ಲರಿಗೂ ನನ್ನ ಹೃದಯದಿಂದ ಕ್ಷಮೆ. ಭಾರತೀಯಳಾದ ನಾನು ನನ್ನ ರಾಷ್ಟ್ರವನ್ನು ಪ್ರೀತಿಸುತ್ತೇನೆ. ಇದು ನನ್ನ ತಾಯ್ನಾಡು. ನಾನು ಕಮೆಂಟ್ ಮಾಡಿದ್ದು ನನ್ನ ಮೂರ್ಖತನದ ಕೃತ್ಯ. ಎಲ್ಲರಲ್ಲಿಯೂ ಕ್ಷಮೆಯಾಚಿಸುವೆ. ಮುಂದೆ ಇಂತಹ ತಪ್ಪು ಮಾಡುವುದಿಲ್ಲ , ಜೈ ಹಿಂದ್; ಎಂದು ಪೋಸ್ಟ್ ಮಾಡಿದ್ದಾಳೆ.
ಈಕೆ ಮುಂಬೈನಲ್ಲಿದ್ದು, ಪೊಲೀಸರು ಮುಂದಿನ ಕ್ರಮ ತೆಗೆದುಕೊಳ್ಳಲಿದ್ದಾರೆ.
