Belthangady: ಶಿರ್ಲಾಲು ಗ್ರಾಮದ ನಂದಗೋಕುಲ ಕಟ್ಟಮನೆ ಎಂಬಲ್ಲಿ ಅಪ್ರಾಪ್ತ ವಯಸ್ಸಿನ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ನಡೆದಿದೆ.
ಸನತ್ (28) ಆರೋಪಿ. ಈತ ಶಿರ್ಲಾಲು ಗ್ರಾಮದ ನಿವಾಸಿ. ಆರೋಪಿ ಯುವತಿಯ ತಂದೆಯ ಕಾರಿನಲ್ಲಿ ಚಾಲಕನಾಗಿ ದುಡಿಯುತ್ತಿದ್ದ. ಹೀಗಾಗಿ ಸಲುಗೆಯಿಂದ ಇದ್ದ. ಕಳೆದ ವರ್ಷ ಮೇ 22 ರಂದು ಅಪ್ರಾಪ್ತ ವಯಸ್ಸಿನ ಯುವತಿಯ ಜನ್ಮದಿನದ ಕಾರ್ಯಕ್ರಮಕ್ಕೆ ಬಂದವನು ರಾತ್ರಿ ಉಳಿದುಕೊಂಡಿದ್ದ. ಅನಂತರ ಯುವತಿ ಜೊತೆ ಒತ್ತಾಯಪೂರ್ವಕವಾಗಿ ಲೈಂಗಿಕ ಸಂಪರ್ಕ ಹೊಂದಿದ್ದ.
ಪದೇ ಪದೇ ಲೈಂಗಿಕ ಸಂಪರ್ಕ ಮಾಡಿದ್ದರಿಂದ ಯುವತಿ ಗರ್ಭವತಿಯಾಗಿದ್ದಳು. ಯುವತಿ ಇತ್ತೀಚೆಗೆ ತಾಯಿಯೊಂದಿಗೆ ಉಜಿರೆ ಖಾಸಗಿ ಆಸ್ಪತ್ರೆಗೆ ಹೋದಾಗ ವೈದ್ಯರು ಪರಿಶೀಲನೆ ಮಾಡಿದ್ದು 3 ತಿಂಗಳ ಗರ್ಭವತಿ ಎಂದು ಹೇಳಿದ್ದಾರೆ. ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಹೋಗುವಂತೆ ಸಲಹೆ ನೀಡಿದ್ದಾರೆ.
ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಯುವತಿ ನೀಡಿದ ದೂರಿನಂತೆ ಆರೋಪಿ ಸನತ್ ವಿರುದ್ಧ ವೇಣೂರು ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ.
