Home » Patna: ಆಸ್ಪತ್ರೆಯಲ್ಲಿ ಗರ್ಭಿಣಿ ಸಾವು; ಮಹಡಿಯಿಂದ ನರ್ಸ್‌ ಅನ್ನು ಎಸೆದು ಸೇಡು ತೀರಿಸಿಕೊಂಡ ಕುಟುಂಬ

Patna: ಆಸ್ಪತ್ರೆಯಲ್ಲಿ ಗರ್ಭಿಣಿ ಸಾವು; ಮಹಡಿಯಿಂದ ನರ್ಸ್‌ ಅನ್ನು ಎಸೆದು ಸೇಡು ತೀರಿಸಿಕೊಂಡ ಕುಟುಂಬ

0 comments
Patna

Patna: 25 ವರ್ಷದ ಗರ್ಭಿಣಿಯೊಬ್ಬರು ಹೊಟ್ಟೆನೋವೆಂದು ಖಾಸಗಿ ನರ್ಸಿಂಗ್‌ ಹೋಮ್‌ಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವ ಘಟನೆಯೊಂದು ಬಿಹಾರದ ನಳಂದ ಜಿಲ್ಲೆಯಲ್ಲಿ ನಡೆದಿದೆ. ಆದರೆ ಮಹಿಳೆ ಸಾವನ್ನಪ್ಪಿದ್ದಕ್ಕೆ ಸಿಟ್ಟುಗೊಂಡ ಆಕೆಯ ಕುಟುಂಬಸ್ಥರು ದಾದಿಯನ್ನು ಮೊದಲ ಮಹಡಿಯಿಂದ ಕೆಳಕ್ಕೆ ತಳ್ಳಿದ್ದು, ತಮ್ಮ ಸೇಡು ತೀರಿಸಿಕೊಂಡಿದ್ದಾರೆ.

ಇದನ್ನೂ ಓದಿ: Open Book Exam: 8 ರಿಂದ 10 ನೇ ತರಗತಿಗೆ ಮುಂದಿನ ಶೈಕ್ಷಣಿಕ ವರ್ಷದಿಂದ ತೆರೆದ ಪುಸ್ತಕ ಪರೀಕ್ಷೆ

ಗುಡಿಯಾ ಕುಮಾರಿ ಎಂಬ ಮಹಿಳೆ ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತ ಹೊಂದಿದ್ದರು. ಇದಕ್ಕೆ ಕೋಪಗೊಂಡ ಮಹಿಳೆಯ ಕುಟುಂಬದವರು ನರ್ಸ್‌ ನೀಡಿದ ಚುಚ್ಚು ಮದ್ದಿನಿಂದ ಆಕೆ ಮೃತ ಹೊಂದಿದ್ದಾಳೆ ಎಂದು ಆರೋಪ ಮಾಡಿ ನರ್ಸನ್ನು ಮಹಡಿಯಿಂದ ತಳ್ಳಿದ್ದಾರೆ. ನರ್ಸ್‌ ಪೂನಂ ಕುಮಾರಿ (35) ಬದುಕುಳಿದಿದ್ದು, ಪರಿಸ್ಥಿತಿ ಮಾತ್ರ ಗಂಭೀರವಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: Astro Tips: ಮನೆಯ ಮುಂದೆ ಹಾಕುವ ಡೋರ್ ಮ್ಯಾಟ್ ಗು ಇದೆ ವಾಸ್ತು ಟಿಪ್ಸ್, ಇಲ್ಲಿದೆ ನೋಡಿ ಡೀಟೇಲ್ಸ್

ಮಹಿಳೆಯ ಸಾವಿನ ನಂತರ ಕೋಪಗೊಂಡ ಕುಟುಂಬದ ಸದಸ್ಯರು ಕ್ಲಿನಿಕ್‌ ಅನ್ನು ಧ್ವಂಸಗೊಳಿಸಿದ್ದು, ನರ್ಸನ್ನು ಬಿಹಾರ ನರ್ಸಿಂಗ್‌ ಹೋಂ ನ 1 ನೇ ಮಹಡಿಯಿಂದ ಎಸೆದಿದ್ದಾರೆ. ಗರ್ಭಿಣಿಯ ಸಾವಿನ ನಂತರ ಕುಟುಂಬದವರು ಆಸ್ಪತ್ರೆಯ ಅನೇಕ ಸೌಲಭ್ಯವನ್ನು ಧ್ವಂಸಗೊಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

You may also like

Leave a Comment