10
Punjab: ತಲೆ ತುಂಬಾ ಕೂದಲು ಇರಬೇಕು ಎನ್ನುವುದು ಪ್ರತಿಯೊಬ್ಬರಿಗೂ ಆಸೆ ಇದ್ದೇ ಇರುತ್ತದೆ. ಇದು ಸಹಜ ಕೂಡಾ. ಆದರೆ ಈ ಆಸೆಯನ್ನೇ ಬಂಡವಾಳ ಮಾಡಿಕೊಂಡ ಕೆಲವರು ಜನರಿಗೆ ಮೋಸ ಮಾಡಿರುವ ಘಟನೆ ಪಂಜಾಬ್‌ನಲ್ಲಿ ನಡೆದಿದೆ.
ಪಂಜಾಬ್‌ನ ಸಂಗ್ರೂರ್‌ನಲ್ಲಿ ತಲೆ ಕೂದಲು ಉದುರುವುದನ್ನು ತಡೆಗೆ ಕ್ಯಾಂಪ್ ಆಯೋಜನೆ ಮಾಡಲಾಗಿತ್ತು. ಈ ಶಿಬಿರದಲ್ಲಿ ತಲೆಗೆ ಹಚ್ಚಲು ಎಣ್ಣೆ ಕೊಡಲಾಗಿದೆ. ಇವರ ಮಾತಿನ ಮೋಡಿಗೆ ಮರುಳಾದ ಅನೇಕರು ಎಣ್ಣೆ ಹಚ್ಚಿಕೊಂಡಿದ್ದರು.
ಕ್ಯಾಂಪ್‌ನಲ್ಲಿ ಕೊಟ್ಟ ಎಣ್ಣೆ ಅನೇಕರು ಹಚ್ಚಿಕೊಂಡ ಪರಿಣಾಮ ಅವರಿಗೆ ಕೂದಲು ಬೆಳೆಯುವ ಬದಲು ಕಣ್ಣಿನಲ್ಲಿ ಉರಿ, ಕಣ್ಣೀರು ಸುರಿದಿದೆ. ಇದರಿಂದ ಜನರಿಗೆ ಕಣ್ಣಿನ ಉರಿ ಹೆಚ್ಚಾಗಿ ಕಣ್ಣು ಕೆಂಪಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
65 ಕ್ಕೂ ಹೆಚ್ಚು ಜನರು ಸಿವಿಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. 50 ಕ್ಕೂ ಹೆಚ್ಚು ಜನರ ಕಣ್ಣಿನ ಇನ್‌ಫೆಕ್ಷನ್‌ಗೆ ನೋವುಗೆ ಒಳಗಾಗಿದ್ದಾರೆ. ಸಂಗ್ರೂರ್‌ನಲ್ಲಿ ಈ ಕ್ಯಾಂಪ್ ಆಯೋಜಿಸಿದ್ದ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ.
