Home » Puttur: ಪುತ್ತೂರು: ಕಾಲೇಜು ಸಿಬ್ಬಂದಿ ಯುವತಿ ಆತ್ಮಹತ್ಯೆ

Puttur: ಪುತ್ತೂರು: ಕಾಲೇಜು ಸಿಬ್ಬಂದಿ ಯುವತಿ ಆತ್ಮಹತ್ಯೆ

0 comments

Puttur: ಪುತ್ತೂರು: ಜಿಡೆಕಲ್ಲು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಿಬ್ಬಂದಿಯಾಗಿದ್ದ ಯುವತಿಯೊಬ್ಬರು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬನ್ನೂರು ಗ್ರಾಮದಲ್ಲಿ ಭಾನುವಾರ (ಆ.17) ರಂದು ನಡೆದಿದೆ.

ಬನ್ನೂರು ಗ್ರಾಮದ ಕನಡ್ಕ ನಿವಾಸಿ ಡೊಂಬಯ್ಯ ಕುಲಾಲ್‌ ಅವರ ಪುತ್ರಿ ತೇಜಸ್ವಿನಿ (22) ಮೃತ ಯುವತಿ.

ಜಿಡೆಕಲ್ಲು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಈಕೆ ತಮ್ಮ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪುತ್ತೂರು ನಗರ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ಮಾಡಿ ಪ್ರಕರಣ ದಾಖಲು ಮಾಡಿ, ತನಿಖೆ ಮಾಡುತ್ತಿದ್ದಾರೆ.

You may also like