Home » Puttur: ವಾಮಂಜೂರು ಶೂಟೌಟ್‌ ಕೇಸು ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌!

Puttur: ವಾಮಂಜೂರು ಶೂಟೌಟ್‌ ಕೇಸು ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌!

0 comments

Puttur: ಮಂಗಳೂರಿನಲ್ಲಿ ಆಕಸ್ಮಿಕವಾಗಿ ಗುಂಡು ಹಾರಾಟ ನಡೆದ ಘಟನೆ ಈ ವರ್ಷದ ಜನವರಿ ತಿಂಗಳಿನಲ್ಲಿ ನಡೆದಿತ್ತು. ಈ ಘಟನೆಯಲ್ಲಿ ವಾಮಂಜೂರಿನ ಸಫ್ವಾನ್‌ ಎಂಬ ವ್ಯಕ್ತಿ ಗಂಭಿರ ಗಾಯಗೊಂಡಿದ್ದು ಈ ಕುರಿತು ವರದಿಯಾಗಿತ್ತು. ಇದೀಗ ಘಟನೆಗೆ ಸಂಬಂಧಪಟ್ಟಂತೆ ತಿರುವೊಂದು ದೊರಕಿದೆ.

ಮಂಗಳೂರು ಪೊಲೀಸರು ಈ ಘಟನೆಯ ತನಿಖೆ ಮಾಡಿದ್ದು, ಬೃಹತ್‌ ಶಸ್ತ್ರಾಸ್ತ್ರ ಡೀಲರ್‌ಗಳನ್ನು ಬಂಧನ ಮಾಡಿರುವ ಕುರಿತು ವರದಿಯಾಗಿದೆ. ಪೊಲೀಸರು ಕೇರಳ ಮೂಲದ ನಟೋರಿಯಸ್‌ ವೆಪನ್‌ ಡೀಲರ್‌ ಸೇರಿ ಐವರನ್ನು ಬಂಧನ ಮಾಡಿದ್ದಾರೆ. ಕೇರಳ ಮೂಲದ ಅಬ್ದುಲ್‌ ಲತೀಫ್‌, ಮನ್ಸೂರ್‌, ನೌಫಾಲ್‌, ಮಹಮ್ಮದ್‌ ಅಸ್ಗರ್‌, ಮಹಮ್ಮದ್‌ ಸಾಲಿಯನ್ನು ಮಂಗಳೂರು ಪೊಲೀಸರು ಬಂಧನ ಮಾಡಿದ್ದಾರೆ ಎಂದು ವರದಿಯಾಗಿದೆ.

ಆರೋಪಿಗಳಿಂದ 3 ಪಿಸ್ತೂಲ್‌, 6 ಸಜೀವ ಮದ್ದು ಗುಂಡುಗಳು, ಹಾಗೂ 12.895 ಕೆ.ಜಿ.ಗಾಂಜಾ, 3ಕಾರು ಹಾಗೂ ಇತರ ಸೊತ್ತುಗಳ ವಶಪಡಿಸಿಕೊಂಡಿದ್ದಾರೆ.

ಮಂಗಳೂರು ಪೊಲೀಸ್‌ ಕಮೀಷನರ್‌ ಅನುಪಮ್‌ ಅಗರ್‌ವಾಲ್ ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ, ” ಸಮಾಜಘಾತುಕ ಕೃತ್ಯ ನಡೆಸಲು ಮುಂಬಯಿಯಿಂದ ಬೃಹತ್‌ ಅಕ್ರಮ ಪಿಸ್ತೂಲ್‌ ಶಸ್ತ್ರಾಸ್ತ್ರ ಸರಬರಾಜು ಇದಾಗಿದೆ. ಹಾಗೂ ಬಂಧಿತರಿಂದ ಮೂರು ಪಿಸ್ತೂಲ್‌ ಹಾಗೂ ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆʼ ಎಂದು ಮಾಹಿತಿ ನೀಡಿದ್ದಾರೆ.

You may also like