3
Puttur: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅರುಣ್ ಕುಮಾರ್ ಪುತ್ತಿಲ ಅವರ ಗಡಿಪಾರು ವಿಚಾರ ಕುರಿತು ವ್ಯಕ್ತಿಯೋರ್ವ ಪ್ರಚೋದನಕಾರಿ ವಿಡಿಯೋ ಮಾಡಿದ್ದು, ಈ ವಿಚಾರಕ್ಕೆ ಸಂಬಂಧಪಟ್ಟಂತೆ ಆರೋಪಿಯ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ವಾಟ್ಸಪ್ ಮೂಲಕ ಆರೋಪಿ ಗಣೇಶ್ ಪ್ರಸಾದ್ ಎಂಬಾತನು ಉದ್ದೇಶಪೂರ್ವಕವಾಗಿ ಸಾರ್ವಜನಿಕರಿಗೆ ಗಾಳಿ ಸುದ್ದಿಯನ್ನು ಹರಡುತ್ತಾ ಹಾಗೂ ಸ್ಥಳೀಯ ಆಡಳಿತ ಭಯ ಹಾಗೂ ಅಪರಾಧಿಕ ಬೆದರಿಯನ್ನೊಡ್ಡಿರುವ ಕಾರಣ ಮಾನ್ಯ ನ್ಯಾಯಾಲಯದ ಅನುಮತಿ ಪಡೆದು ಆರೋಪಿಯ ವಿರುದ್ಧ ಪುತ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ವರದಿಯಾಗಿದೆ.
