Puttur: ಬಿಜೆಪಿ ಮುಖಂಡ ಪಿ.ಜಿ.ಜಗನ್ನಿವಾಸ ಅವರ ಪುತ್ರ ಶ್ರೀಕೃಷ್ಣ ಜೆ ರಾವ್ ಅವರು ತನ್ನ ಸಹಪಾಠಿ ವಿದ್ಯಾರ್ಥಿನಿಯನ್ನು ಮದುವೆಯಾಗುವುದಾಗಿ ವಂಚನೆ ಮಾಡಿದ್ದಾರೆ. ಈ ಕುರಿತು ಆರಂಭದಲ್ಲಿ ಬಿಜೆಪಿ ಮತ್ತು ಹಿಂದು ಸಂಘಟನೆಗಳು ನೊಂದ ಕುಟುಂಬದ ನೋವಿಗೆ ಸ್ಪಂಧಿಸದಿದ್ದಾಗ ಎಸ್‌ಡಿಪಿಐ ಪುತ್ತೂರು ನಗರಸಭೆ ಮುಂದೆ ಪ್ರತಿಭಟನೆ ಮಾಡಿತು. ಈ ಪ್ರತಿಭಟನೆಯಲ್ಲಿ ನೊಂದ ವಿದ್ಯಾರ್ಥಿನಿಯ ತಾಯಿ ಜೊತೆಗಿದ್ದರು. ಆದರೆ ಇತರ ಪಕ್ಷದ ಕುತಂತ್ರದಿಂದ ನಮ್ಮ ಮೇಲೆಯೇ ಕೇಸು ದಾಖಲಾಯಿತು. ನಾವು ಪ್ರತಿಭಟನೆ ಮಾಡಿದ ಕೂಡಲೆ ಮೌನವಾಗಿದ್ದ ಸಂಘ ಪರಿವಾರ ಓಡೋಡಿ ಬಂದು ನಾವು ನ್ಯಾಯ ಕೊಡುತ್ತೇವೆ ಎಂಬ ಭರವಸೆ ನೀಡುತ್ತಾರೆ. ಆದರೆ ಈಗ ಮತ್ತೆ ಅವನ್ಯಾರೂ ಬಾರದಿದ್ದಾಗ ನಾವು ನೊಂದ ಕುಟುಂಬದ ಜೊತೆಗೆ ನಿಲ್ಲಲಿದ್ದೇವೆ ಎಂದು ಎಸ್‌ಡಿಪಿಐ ಮುಂದೆ ಬಂದಿದ್ದಾರೆ.
ಆರೋಪಿ ಸ್ಥಾನದಲ್ಲಿ ಮುಸಲ್ಮಾನರನ್ನು ಕಂಡರೆ ದೆವ್ವ ಬಂದಂತೆ ವರ್ತಿಸುತ್ತಾರೆ. ಹಿಂದುತ್ವದ ಬಗ್ಗೆ ಮಾತನಾಡುವ ಬಿಜೆಪಿ ಸಂಘ ಪರಿವಾರದ ಹಿಂದು ಸಂಘಟನೆಗಳು ಇವತ್ತು ಹಿಂದು ಹೆಣ್ಣು ಮಗಳಿಗೆ ಅನ್ಯಾಯವಾದಾಗ ಯಾಕೆ ಮಾತನಾಡುತ್ತಿಲ್ಲ. ಸಂಘ ಪರಿವಾರ ಹಿಂದುತ್ವದ ನಾಟಕ ಕೊನೆಗೊಳಿಸಲಿ. ನೊಂದ ಕುಟುಂಬದೊಂದಿಗೆ ಇವಯಾರು ಬಾರದಿದ್ದರೆ ಎಸ್‌ಡಿಪಿಐ ನ್ಯಾಯದ ಹೋರಾಟಕ್ಕಾಗಿ ಪರಿಪೂರ್ಣವಾಗಿ ಭಾಗವಹಿಸಲಿದೆ. ವಿಧಾನ ಸೌಧದ ಮುಂದೆ ಪ್ರತಿಭಟನೆ ಮಾಡಲಿದೆ ಎಂದು ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಮತ್ತು ಉಪಾಧ್ಯಕ್ಷ ಮೋನಿಷ್ ಆಲಿ ಅವರು ಪತ್ರಿಕಾಗೋಷ್ಟಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.ಪತ್ರಿಕಾಗೋಷ್ಟಿಯಲ್ಲಿ ಎಸ್‌ಡಿಪಿಐ ಜಿಲ್ಲಾ ಉಪಾಧ್ಯಕ್ಷ ಮೌನೀಷ್ ಆಲಿ, ಎಸ್‌ಡಿಪಿಐ ಜಿಲ್ಲಾ ಕಾರ್ಯದರ್ಶಿ ಅಶ್ರಫ್, ಪುತ್ತೂರು ವಿಧಾನಸಭಾ ಸಮಿತಿ ಅಧ್ಯಕ್ಷ ಅಶ್ರಫ್ ಬಾವು, ಸುಳ್ಯ ವಿಧಾನಸಭಾ ಸಮಿತಿ ಸದಸ್ಯ ಬಾಬು ಎನ್ ಸವಣೂರು, ಜೊತೆ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಉಪಸ್ಥಿತರಿದ್ದರು.
