Home » Puttur: ಪ್ರೀತಿ-ಪ್ರೇಮ ವಿಚಾರ; ಹುಡುಗಿ ವಿಷಯಕ್ಕೆ ಬರಬೇಡ ಎಂದು ಯುವಕನಿಗೆ ಹಲ್ಲೆ, ಜೀವಬೆದರಿಕೆ; ಪ್ರಕರಣ ದಾಖಲು

Puttur: ಪ್ರೀತಿ-ಪ್ರೇಮ ವಿಚಾರ; ಹುಡುಗಿ ವಿಷಯಕ್ಕೆ ಬರಬೇಡ ಎಂದು ಯುವಕನಿಗೆ ಹಲ್ಲೆ, ಜೀವಬೆದರಿಕೆ; ಪ್ರಕರಣ ದಾಖಲು

1 comment
Puttur

Puttur: ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ವಿಚಾರಕ್ಕೆ ಸಂಬಂಧಪಟ್ಟಂತೆ ತಂಡವೊಂದು ಯುವಕನಿಗೆ ಹಲ್ಲೆ ಮಾಡಿದ ಘಟನೆಯೊಂದು ಕುರಿಯ ಮಲಾರ್‌ ಎಂಬಲ್ಲಿ ನಡೆದಿದೆ ಎಂದು ವರದಿಯಾಗಿದೆ. ಈ ಘಟನೆ ಕುರಿತು ಪುತ್ತೂರು ಗ್ರಾಮಾಂತರ ಪೊಲೀಸ್‌ ಠಾಣೆಗೆ ಅಶ್ವಿತ್‌ ಕುಮಾರ್‌ ದೂರು ನೀಡಿದ್ದಾರೆ.

ಇದನ್ನೂ ಓದಿ: HD Kumarswamy: ಕುಮಾರಸ್ವಾಮಿಗಿಂತಲೂ ಹೆಂಡತಿಯೇ ಹೆಚ್ಚು ಶ್ರೀಮಂತೆ – HDK ಒಟ್ಟು ಆಸ್ತಿ ಎಷ್ಟು?!

ಏ.3 ರಂದು ಕುರಿಯ ಗ್ರಾಮದ ಮಲಾರ್‌ನಲ್ಲಿ ಇದ್ದ ಸಂದರ್ಭದಲ್ಲಿ ಪರಿಚಯದ ಸಚಿನ್‌ ಮುಕ್ವೆ ಎಂಬಾತ ಕರೆ ಮಾಡಿದ್ದು, ನಿನ್ನಲ್ಲಿ ಮಾತನಾಡಲು ಇದೆ ಎಂದು ತಿಳಿಸಿದ್ದು, ನಂತರ ಮಲಾರ್‌ನಲ್ಲಿರುವುದಾಗಿಯೂ, ದರ್ಬೆಗೆ ಬರುವುದಾಗಿ ತಿಳಿಸಿದ್ದು, ನಂತರ ಬೈಕ್‌ನಲ್ಲಿ ಹೊರಟು ಆರ್ಯಾಪು ಗ್ರಾಮದ ಕಲ್ಲರ್ಪೆಯ ಮಾಣಿ-ಮೈಸೂರು ಹೆದ್ದಾರಿಯಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಸಚಿನ್‌ ಮುಕ್ವೆ ಹಾಗೂ ಇತರರು ಕಾರಿನಲ್ಲಿ ದರ್ಬೆ ಕಡೆಯಿಂದ ಬರುತ್ತಿದ್ದು, ಅಶ್ವಿತ್‌ ಕುಮಾರ್‌ ನನ್ನು ನೋಡಿ, ಅಡ್ಡಗಟ್ಟಿ ತಡೆದು, ಕಾರಿನಿಂದ ಇಳಿದು ಬಂದು, ಅಶ್ವಿತ್‌ ಕುಮಾರ್‌ ಮತ್ತು ಯುವತಿ ಮಧ್ಯೆ ಇರುವ ಪ್ರೀತಿ ವಿಚಾರದ ಕುರಿತು ಹೇಳಿದ್ದು, ಆಕೆಯ ವಿಚಾರಕ್ಕೆ ಬಂದರೆ ನಿನ್ನನ್ನು ಸಾಯಿಸುತ್ತೇನೆ ಎಂದು ಹೇಳಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾಗಿಯೂ, ಹಾಗೂ ಸಚಿನ್‌, ಅಂಕಿತ್‌ ಕೈಯಿಂದ ಹೊಡೆದಿರುವುದಾಗಿಯೂ, ಜೊತೆಗೆ ಪರಿಚಯ ಇಲ್ಲದ ವ್ಯಕ್ತಿಗಳು ಕೈಯಲ್ಲಿ ಗಟ್ಟಿಯಾಗಿ ಹಿಡಿದುಕೊಂಡಿದ್ದು, ಅಶ್ವಿತ್‌ ಅವರಿಂದ ತಪ್ಪಿಸಲೆಂದು ಓಡಿದಾಗ, ಮುಂದಕ್ಕೆ ಹುಡುಗಿಯ ವಿಷಯಕ್ಕೆ ಬಂದರೆ ಕೊಲ್ಲದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಅಶ್ವಿತ್‌ ಕುಮಾರ್‌ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: Road Accident: ಬೆಂಗಳೂರಿನಲ್ಲಿ ಭಯಾನಕ ಆಕ್ಸಿಡೆಂಟ್‌; ಸ್ಕೂಟರ್‌ ಸವಾರನ ಮೇಲೆ ಎರಗಿದ ಕೋಲೆ ಬಸವ

ಈ ಕುರಿತು ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಕಲಂ 143, 147, 504, 341, 323, 506, 149 ಐಪಿಸಿಯಂತೆ ಪ್ರಕರಣ ದಾಖಲಾಗಿರುವ ಕುರಿತು ವರದಿಯಾಗಿದೆ.

You may also like

Leave a Comment