Home » Putturu: ಕಡಬದಲ್ಲಿ ಶಂಕಿತ ನಕ್ಸಲರ ಆಗಮನ; ಊಟ ಮಾಡಿ ದಿನಸಿ ಪಡೆದು ಶಂಕಿತರ ತಂಡ

Putturu: ಕಡಬದಲ್ಲಿ ಶಂಕಿತ ನಕ್ಸಲರ ಆಗಮನ; ಊಟ ಮಾಡಿ ದಿನಸಿ ಪಡೆದು ಶಂಕಿತರ ತಂಡ

1 comment
Putturu

Putturu: ಗುರುವಾರ ರಾತ್ರಿ ಸಮಯದಲ್ಲಿ ಶಂಕಿತರ ತಂಡವೊಂದು ಕಡಬ ಪೊಲೀಸ್‌ ಠಾಣಾ ವ್ಯಾಪ್ತಿಯ ಮನೆಯೊಂದಕ್ಕೆ ಬಂದಿದ್ದು, ನಂತರ ಊಟ ಮಾಡಿ, ದಿನಸಿ ಸಾಮಾಗ್ರಿಗಳನ್ನು ಪಡೆದುಕೊಂಡು ಹೋಗಿರುವ ಘಟನೆಯೊಂದ ಶುಕ್ರವಾರ ಬೆಳಕಿಗೆ ಬಂದಿದೆ.

ಇದನ್ನೂ ಓದಿ: NCERT : ಈ ಶೈಕ್ಷಣಿಕ ವರ್ಷದಿಂದ ಹಿಂದುತ್ವ ವಿಷಯಗಳಿಗೆ ಗೇಟ್‌ಪಾಸ್‌

ಕೊಂಬಾರು ಗ್ರಾಮದ ಚೇರು ಪ್ರದೇಶದ ಮನೆಯೊಂದಕ್ಕೆ ಶಂಕಿತರು ಭೇಟಿ ನೀಡಿದ್ದಾರೆ ಎಂದು ವರದಿಯಾಗಿದೆ. ಗುರುವಾರ ಸಂಜೆ ಏಳು ಗಂಟೆ ಸಮಯದಲ್ಲಿ ಈ ತಂಡ ಮನೆಗೆ ಆಗಮನಿಸಿದ್ದು, ಊಟ ಮಾಡಿ ಒಂಬತ್ತು ಗಂಟೆ ಸಮಯದಲ್ಲಿ ದಿನಸಿ ಪಡೆದು ತೆರಳಿದ್ದಾಗಿ ವರದಿಯಾಗಿದೆ. ಈ ಶಂಕಿತರ ತಂಡದಲ್ಲಿ ನಾಲ್ಕರಿಂದ ಆರು ಮಂದಿ ಇದ್ದರು ಎನ್ನಲಾಗಿದೆ. ಶಂಕಿತರು ಶಸ್ತ್ರಾಸ್ತ್ರ ಹಿಡಿದು ಬಂದಿದ್ದರು ಎನ್ನಲಾಗಿದೆ.

ಇದನ್ನೂ ಓದಿ: Belthangady: ಹೆರಿಗೆ ವೇಳೆ ವಿಪರೀತ ರಕ್ತಸ್ರಾವ- ಮಹಿಳೆ ಸಾವು, ವೈದ್ಯರ ನಿರ್ಲಕ್ಷ್ಯವೇ ಕಾರಣ-ಕುಟುಂಬಸ್ಥರಿಂದ ಗಂಭೀರ ಆರೋಪ

ಈ ಮಾಹಿತಿ ಇಲಾಖೆಗೆ ದೊರಕುತ್ತಲೇ ನಕ್ಸಲ್‌ ನಿಗ್ರಹ ಪಡೆ, ಪೊಲೀಸರು ಮಾಹಿತಿ ಕಲೆ ಹಾಕುವ ಕೆಲಸದಲ್ಲಿ ನಿರತರಾಗಿದ್ದಾರೆ. ಎಎನ್‌ಎಫ್‌ ತಂಡ ಮನೆಗೆ ಭೇಟಿ ನೀಡಿದೆ. ಹಾಗೂ ತನಿಖೆ ನಡೆಸುತ್ತಿದ್ದಾರೆ. ಮಾ.23 ರಂದು ಕೂಡಾ ಶಂಕಿತರು ಕಡಬ ತಾಲೂಕಿನ ಐನೆಕಿದು ಗ್ರಾಮದ ಅರಣ್ಯದ ಅಂಚಿನ ಮನೆಗೆ ಭೇಟಿ ನೀಡಿದ್ದು, ಊಟ ಮಾಡಿ, ದಿನಸಿ ಸಾಮಾಗ್ರಿಗಳನ್ನು ಪಡೆದು ಹೋಗಿದ್ದರು. ಇದೀಗ ಎ.5 ರಂದು ಶಂಕಿತರು ಚೇರು ಎಂಬಲ್ಲಿನ ಮನೆಗೆ ಭೇಟಿ ನೀಡಿದ್ದು, ಎಷ್ಟು ಮಂದಿ ಇದ್ದರು ಎಂದು ತಿಳಿದು ಬಂದಿಲ್ಲ. ಒಟ್ಟು 4 ಅಥವಾ 6 ಮಂದಿ ಇದ್ದರು ಎಂದು ವರದಿಯಾಗಿದೆ.

You may also like

Leave a Comment