Home » Putturu: ತೋಟದ ನೀರಿನ ತೊಟ್ಟಿಯಲ್ಲಿ ಯುವಕನ ಮೃತದೇಹ ಪತ್ತೆ!

Putturu: ತೋಟದ ನೀರಿನ ತೊಟ್ಟಿಯಲ್ಲಿ ಯುವಕನ ಮೃತದೇಹ ಪತ್ತೆ!

0 comments

Putturu: ತೋಟದಲ್ಲಿ ನಿರ್ಮಿಸಿದ ನೀರಿನ ತೊಟ್ಟಿಗೆ ಯುವಕನೋರ್ವ ಬಿದ್ದು ಸಾವಿಗೀಡಾದ ಘಟನೆ ನರಿಮೊಗರು ಗ್ರಾಮದ ಮಾರ್ಕೂರು ಬಳಿ ನಡೆದಿದೆ.

ಮಾರ್ಕೂರು ನಿವಾಸಿ ಕಿರಣ್‌ ನಾಯ್ಕ್‌ (30) ಎಂಬಾತ ಮೃತ ಯುವಕ.

ಬೆತ್ತಲೆಯಾಗಿ ಮೃತದೇಹ ಪತ್ತೆಯಾಗಿದ್ದು, ಸಂಶಯಗಳಿಗೆ ಕಾರಣವಾಗಿದೆ. ಡಾ.ಶಂಕರ್‌ ಭಟ್‌ ಅವರಿಗೆ ಸೇರಿದ ಮಾರ್ಕೂರುನಲ್ಲಿರುವ ತೋಟದಲ್ಲಿ ಟಾರ್ಪಲಿನಲ್ಲಿ ನಿರ್ಮಿಸಿದ ತಾತ್ಕಾಲಿಕ ತೊಟ್ಟಿಗೆ ಯುವಕ ಬಿದ್ದಿದ್ದಾನೆ.

ಕೂಲಿ ಕಾರ್ಮಿಕನಾಗಿರುವ ಯುವಕ, ಕುಡಿತದ ದಾಸನಾಗಿದ್ದ ಎನ್ನಲಾಗಿದೆ. ಸ್ಥಳಕ್ಕೆ ಪುತ್ತೂರು ನಗರ ಠಾಣೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ಮಾಡುತ್ತಿದ್ದಾರೆ. ಅಗ್ನಿಶಾಮಕ ದಳ ಆಗಮಿಸಿದ ಬಳಿಕ ಮೃತದೇಹ ಮೇಲಕ್ಕೆತ್ತುವ ಕಾರ್ಯ ನಡೆದಿದೆ.

You may also like