Home » Ram Mandir: ರಾಮಮಂದಿರದ ಮೇಲೆ ದಾಳಿಗೆ ಸಂಚು; ಶಂಕಿತ ಉಗ್ರ ಅಬ್ದುಲ್‌ ಅರೆಸ್ಟ್‌!

Ram Mandir: ರಾಮಮಂದಿರದ ಮೇಲೆ ದಾಳಿಗೆ ಸಂಚು; ಶಂಕಿತ ಉಗ್ರ ಅಬ್ದುಲ್‌ ಅರೆಸ್ಟ್‌!

0 comments

Ram Mandir: ಅಯೋಧ್ಯೆ ರಾಮಮಂದಿರದ ಮೇಲೆ ದಾಳಿಗೆ ಯತ್ನ ಮಾಡಿದ್ದ ಶಂಕಿತ ಉಗ್ರನನ್ನು ಫರಿದಾಬಾದ್‌ನಲ್ಲಿ ಬಂಧನ ಮಾಡಲಾಗಿದೆ. ಶಂಕಿತನನ್ನು ಗುಜರಾತ್‌ ಎಟಿಎಸ್‌ ಕೇಂದ್ರ ಏಜೆನ್ಸಿಗಳು ಮತ್ತು ಫರಿದಾಬಾದ್‌ ಎಸ್‌ಟಿಎಫ್‌ನೊಂದಿಗೆ ಜಂಟಿ ಕಾರ್ಯಾಚರಣೆ ಮಾಡಿ ಬಂಧನ ಮಾಡಿದೆ.

ಉತ್ತರ ಪ್ರದೇಶದ ಫೈಜಾಬಾದ್‌ ನಿವಾಸಿ 19 ವರ್ಷದ ಅಬ್ದುಲ್‌ ರೆಹಮಾನ್‌ ಬಂಧಿತ ಆರೋಪಿ. ಆತನ ಬಳಿ ಎರಡು ಹ್ಯಾಂಡ್‌ ಗ್ರೆನೇಡ್‌ಗಳನ್ನು ವಶಪಡಿಸಿಕೊಂಡಿದೆ. ರೆಹಮಾನ್‌ ದೊಡ್ಡ ಭಯೋತ್ಪಾದಕ ದಾಳಿ ನಡೆಸಲು ಸಜ್ಜಾಗಿದ್ದಾನೆಂದು ಅವರಿಗೆ ಮಾಹಿತಿ ಸಿಕ್ಕಿದೆ. ಅನಂತರ ಪ್ರಕರಣವನ್ನು ಹರಿಯಾಣ ಪೊಲೀಸರ ಪಲ್ವಾಲ್‌ ಎಸ್‌ಟಿಎಫ್‌ಗೆ ಹಸ್ತಾಂತರ ಮಾಡಲಾಯಿತು. ಫರಿದಾಬಾದ್‌ನ ಪಾಲಿಯ ಬನ್ಸ್‌ ರಸ್ತೆಯಲ್ಲಿ ಅಬ್ದುಲ್‌ನನ್ನು ಬಂಧನ ಮಾಡಲಾಯಿತು.

ಈ ಕುರಿತು ಪ್ರಕರಣ ದಾಖಲು ಮಾಡಲಾಗಿದ್ದು, ಅಬ್ದುಲ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. 10 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

You may also like