Rape: UPಯ ಹತ್ರಾಸ್‌ನ ಸೇರ್ ಫೂಲ್ ಚಂದ್ ಬಾಗ್ಲಾ ಪಿಜಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ(Collage students) ಮೇಲೆ ಅತ್ಯಾಚಾರ(Rape) ಎಸಗಿ ವಿಡಿಯೋ(Video) ಮಾಡಿದ್ದ 54 ವರ್ಷದ ಪ್ರಾಧ್ಯಾಪಕನನ್ನು ಪ್ರಯಾಗ್‌ರಾಜ್‌ನಲ್ಲಿ(Prayag Raj) ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
8 ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾಗಿ ಪ್ರಾಧ್ಯಾಪಕ ಒಪ್ಪಿಕೊಂಡಿದ್ದಾರೆ ಎಂದು ಹತ್ರಾಸ್ ಎಸ್‌ಪಿ ಚಿರಂಜೀವ್ ನಾಥ್ ಸಿನ್ಹಾ ಹೇಳಿದ್ದಾರೆ. “ವಿದ್ಯಾರ್ಥಿನಿಯರನ್ನು ಬ್ಲ್ಯಾಕ್‌ಮೇಲ್ ಮಾಡಲು ಅವರು ವಿಡಿಯೋ ರೆಕಾರ್ಡ್ ಮಾಡಿದ್ದಾರೆ” ಎಂದು ಎಸ್‌ಪಿ ಹೇಳಿದರು.
ಹತ್ರಾಸ್‌ನಲ್ಲಿರುವ ಸೇಥ್ ಫೂಲ್ ಚಂದ್ ಬಾಗ್ಲಾ ಪಿಜಿ ಕಾಲೇಜಿನ ಮುಖ್ಯ ಪ್ರಾಕ್ಟರ್ ರಜನೀಶ್ ಕುಮಾರ್ ವಿಷಯ ಹೊರ ಬೀಳುತ್ತಿದ್ದಂತೆ ಕೆಲ ದಿನಗಳಿಂದ ಪರಾರಿಯಾಗಿದ್ದ. ಅಲ್ಲದೆ ವಿದ್ಯಾರ್ಥಿಗಳನ್ನು ಲೈಂಗಿಕವಾಗಿ ನಿಂದಿಸುತ್ತಿರುವ ವೀಡಿಯೊಗಳನ್ನು ಪೆನ್ ಡ್ರೈವ್‌ನಲ್ಲಿ ಅಧಿಕಾರಿಗಳೊಂದಿಗೆ ಹಂಚಿಕೊಂಡಿದ್ದರು. ಈ ನೀಚ ಎಷ್ಟು ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಎಸಗಿದ್ದಾನೆ ಎಂದು ಇನ್ನು ಸ್ಪಷ್ಟ ಮಾಹಿತಿ ಇನ್ನೂ ತಿಳಿದಿಲ್ಲ.
