Home » Actress Hema Arrest: ರೇವ್ ಪಾರ್ಟಿ ಪ್ರಕರಣ – ಬುರ್ಕಾ ಧರಿಸಿ ವಿಚಾರಣೆಗೆ ಬಂದ ನಟಿ ಹೇಮಾ ಬಂಧನ !!

Actress Hema Arrest: ರೇವ್ ಪಾರ್ಟಿ ಪ್ರಕರಣ – ಬುರ್ಕಾ ಧರಿಸಿ ವಿಚಾರಣೆಗೆ ಬಂದ ನಟಿ ಹೇಮಾ ಬಂಧನ !!

0 comments
Actress Hema Arrest

Actress Hema Arrest: ಬೆಂಗಳೂರಿನಲ್ಲಿ ನಡೆದಿದ್ದ ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ತೆಲುಗು ನಟಿ ಹೇಮಾರನ್ನು ಬಂಧಿಸುವಲ್ಲಿ(Actress Hema Arrest) ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.

 

ಇತ್ತೀಚೆಗೆ ಬೆಂಗಳೂರಿನಲ್ಲಿ ರೇವ್ ಪಾರ್ಟಿ(Rave Party) ಯೊಂದು ಭಾರಿ ಸಂಚಲನ ಮೂಡಿಸಿದ್ದು ಗೊತ್ತೇ ಇದೆ. ಈ ಪಾರ್ಟಿಯಲ್ಲಿ ತೆಲುಗು ನಟ ನಟಿಯರು ಇದ್ದರು ಎನ್ನಲಾಗಿತ್ತು. ಹೀಗಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗದೆ ಡ್ರಾಮಾ ಮಾಡುತ್ತಿದ್ದ ನಟಿಗೆ, ತಕ್ಷಣ ಹಾಜರಾಗುವಂತೆ ಹೇಮಾಗೆ ಸಿಸಿಬಿ(CCB) ನೋಟಿಸ್ ನೀಡಿತ್ತು. ಅದರಂತೆ ಇಂದು ನಟಿ ಹೇಮಾ ಬುರ್ಕಾ ಧರಿಸಿ ಬಂದಿದ್ದರು. ಈ ವೇಳೆ ಸಿಸಿಬಿ ಅಧಿಕಾರಿಗಳ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡದ ಹಿನ್ನಲೆಯಲ್ಲಿ ನಟಿಯನ್ನು ಬಂಧಿಸಿದ್ದಾರೆ.

ಅಂದಹಾಗೆ ಡ್ರಗ್ಸ್‌ ಹಾಗೂ ರೇವ್ ಪಾರ್ಟಿ ಆಯೋಜನೆಯಲ್ಲಿ ನಟಿ ಹೇಮಾ ಪ್ರಮುಖ ಪಾತ್ರ ವಹಿಸಿದ್ದರು ಎಂಬ ಮಾಹಿತಿಯಿದೆ. ಆದರೆ, ತಾವು ಅಲ್ಲಿ ಇರಲಿಲ್ಲ ಎಂಬುದನ್ನು ನಿರೂಪಿಸಲು ಹಲವು ಬಾರಿ ಪೊಲೀಸರನ್ನು ದಿಕ್ಕು ತಪ್ಪಿಸಲು ಪ್ರಯತ್ನಿಸಿದ್ದರು. ಆದರೆ ಪೋಲೀಸರು ಯಾವುದಕ್ಕೂ ಕ್ಯಾರೆ ಅನ್ನದೆ ಬಂಧಿಸಿದ್ದಾರೆ.

ಇನ್ನು ಹೇಮಾರನ್ನು ಅರೆಸ್ಟ್ ಮಾಡಿದ ಬಳಿಕ ವೈದ್ಯಕೀಯ ಪರೀಕ್ಷೆಗಾಗಿ ರಕ್ತ, ಮೂತ್ರ, ಉಗುರು, ಕೂದಲಿನ ಮಾದರಿ ಸಂಗ್ರಹಿಸಲಾಗಿದೆ. ವೈದ್ಯಕೀಯ ಪರೀಕ್ಷೆ ಮುಗಿದ ನಂತರ ಆಸ್ಪತ್ರೆಯಿಂದ ಹೊರಬರುವಾಗ ಮಾಧ್ಯಮಗಳ ಕ್ಯಾಮೆರಾ ಕಂಡು ಹೇಮಾ ಅವರು ಡ್ರಾಮಾ ಮಾಡಿದ್ದಾರೆ.

You may also like

Leave a Comment