Hesaraghatta: ಹೆಸರಘಟ್ಟ ಬಳಿ ಬಿಜಿಎಸ್ ಲೇಔಟ್ ಬಳಿ ನಡೆದ ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆ ಪ್ರಕರಣಕ್ಕೆ ಕುರಿತಂತೆ ಶಾಕಿಂಗ್ ನ್ಯೂಸ್ ಹೊರಬಿದ್ದಿದೆ. ಹೆಣ್ಣು ಕೊಟ್ಟ ಅತ್ತೆಯೇ ತನ್ನ ಅಳಿಯನನ್ನು ಕೊಲೆಗೈದ ವಿಚಾರ ತನಿಖೆ ವೇಳೆ ತಿಳಿದು ಬಂದಿದೆ.
ಲೋಕನಾಥ್ ಸಿಂಗ್ ಮಾ.22 ರಂದು ಕೊಲೆಯಾಗಿದ್ದು, ಇದನ್ನು ಕಂಡಾಗ ಯಾರೋ ವೈರಿಗಳು ಅಥವಾ ರೌಡಿಶೀಟರ್‌ಗಳು ಕೊಲೆ ಮಾಡಿರಬಹುದು ಎಂದು ಅನುಮಾನ ವ್ಯಕ್ತಪಡಿಸಲಾಗಿತ್ತು. ಆದರೆ ಸ್ವಂತ ಅತ್ತೆಯೇ ಈ ಕೃತ್ಯ ಎಸಗಿರುವುದು ಪೊಲೀಸ್ ತನಿಖೆ ಸಂದರ್ಭ ತಿಳಿದು ಬಂದಿದೆ.
ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಮಗಳಿಗೆ ಕಳೆದ ಡಿಸೆಂಬರ್‌ನಲ್ಲಿ ಬ್ಲಾಕ್‌ಮೇಲ್ ಮಾಡಿ ಲೋಕನಾಥ್ ಮದುವೆಯಾಗಿದ್ದರು. ಮಗಳ ಭವಿಷ್ಯ, ಕುಟುಂಬದ ಮರ್ಯಾದೆಗೆ ಹೆದರಿ ಯುವತಿಯ ತಂದೆ ತಾಯಿ ಮಗಳನ್ನು ಮದುವೆ ಮಾಡಿ ಕೊಡುತ್ತಾರೆ. ಆದರೆ ಇದಕ್ಕೆ ತಂದೆ ತಾಯಿ ಇವನಿಗೆ ಬುದ್ಧಿ ಕಲಿಸಬೇಕು ಎಂದು ಅಂದಾಜಿಸಿದ್ದರು.
ಅಳಿಯ, ಮಗಳ ಜೊತೆ ಬಿಜಿಎಸ್ ಲೇಔಟ್‌ಗೆ ಮಾ.22 ರಂದು ಯುವತಿಯ ತಾಯಿ ಬಂದಿದ್ದಾರೆ. ನಂತರ ಅಳಿಯನಿಗೆ ಸೇರಿದ ಜಾಗದಲ್ಲಿ ಪಾರ್ಟಿ ಮಾಡಿದ್ದಾರೆ. ನಿರ್ಮಾಣ ಹಂತದ ಕಟ್ಟಡದಲ್ಲಿ ಗಂಡ ಹೆಂಡತಿ ಪಾರ್ಟಿ ಮಾಡಿದ್ದು, ಈ ವೇಳೆ ಜೊತೆಯಲ್ಲಿದ್ದ ಗನ್‌ಮ್ಯಾನ್‌ಗೆ ಏನನ್ನೋ ತರಲು ಹೇಳಿ ಕಳುಹಿಸಿದ್ದಾರೆ.
ಟೈಟ್ ಆಗಿದ್ದ ಅಳಿಯ ಲೋಕನಾಥ್ ಸಿಂಗ್‌ಗೆ ಅತ್ತೆ ಊಟದಲ್ಲಿ ನಿದ್ದೆ ಮಾತ್ರೆ ಹಾಕಿದ್ದರು. ಯಾವಾಗ ಅಳಿಯ ನಿದ್ದೆಗೆ ಜಾರಿದನೋ ಆತ ಹರಿತವಾದ ಆಯುಧದಿಂದ ಅತ್ತೆ ಅಳಿಯ ಕುತ್ತಿಗೆ ಕುಯ್ದಿದ್ದಾರೆ. ಅಲ್ಲೇ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ ಲೋಕನಾಥ್ ಸಿಂಗ್.
ಸೋಲದೇನವಹಳ್ಳಿ ಪೊಲೀಸರು ಅಮ್ಮ-ಮಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ.
