6
Renukaswamy Photo: ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ದರ್ಶನ್ ಸೇರಿ ಅನೇಕರ ವಿರುದ್ಧ ಪ್ರಬಲ ಸಾಕ್ಷಿಗಳು ಸಿಕ್ಕಿದ್ದು, ಈಗಾಗಲೇ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದಾರೆ.
ಇದರ ಜೊತೆಗೆ ಟಿವಿ9 ಕನ್ನಡ ಮಾಧ್ಯಮಕ್ಕೆ ಲಭ್ಯವಾಗಿರುವ ಫೋಟೋವೊಂದು ವೈರಲ್ ಆಗಿದೆ. ಹೌದು, ರೇಣುಕಾಸ್ವಾಮಿ ಕೈ ಮುಗಿದು ಅಂಗಲಾಚುತ್ತಿರುವ ಫೋಟೋವೊಂದು ಲಭ್ಯವಾಗಿರುವ ಕುರಿತು ಮಾಧ್ಯಮ ಪ್ರಕಟ ಮಾಡಿದೆ. ಈ ಫೋಟೋ ನೋಡಿದರೆ ಎಂತವರಿಗೂ ಒಮ್ಮೆ ಮನಸ್ಸು ಮರುಗದೇ ಇರದು. ಇದು ಪಟ್ಟಣಗೆರೆ ಶೆಡ್‌ನಲ್ಲಿ ಕೊಲೆ ಮಾಡಿದ ಸಂದರ್ಭದಲ್ಲಿ ತೆಗೆದ ಫೋಟೋ ಎಂದು ಮಾಧ್ಯಮ ಪ್ರಕಟ ಮಾಡಿದೆ.
ವ್ಯವಸ್ಥಿತ ಪ್ಲ್ಯಾನ್ ಮಾಡಿ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಪಟ್ಟಣಗೆರೆಯಲ್ಲಿರುವ ಶೆಡ್‌ಗೆ ಕರೆದುಕೊಂಡು ಹೋಗಿ ದರ್ಶನ್ ಆಂಡ್ ಗ್ಯಾಂಗ್ ಹಲ್ಲೆ ಮಾಡಿ, ಕೊಲೆ ಮಾಡಿರುವ ಆರೋಪವಿದೆ. ವರದಿಗಳ ಪ್ರಕಾರ, ರೇಣುಕಾಸ್ವಾಮಿಗೆ ಸಾಕಷ್ಟು ಟಾರ್ಚರ್ ನೀಡಲಾಗಿತ್ತು. ಇದೀಗ ರೇಣುಕಾಸ್ವಾಮಿ ಕೈ ಮುಗಿದು ಅಂಗಲಾಚುತ್ತಿರುವ ಫೊಟೋ ವೈರಲ್ ಆಗಿದೆ.
