Home » Rikki Rai: ಮುತ್ತಪ್ಪ ರೈ ರಿಕ್ಕಿ ಮೇಲೆ ಫೈರಿಂಗ್‌ ಪ್ರಕರಣ; ಮೊದಲ ಪತ್ನಿ ಸೇರಿ ಮೂವರ ವಿರುದ್ಧ ದೂರು!

Rikki Rai: ಮುತ್ತಪ್ಪ ರೈ ರಿಕ್ಕಿ ಮೇಲೆ ಫೈರಿಂಗ್‌ ಪ್ರಕರಣ; ಮೊದಲ ಪತ್ನಿ ಸೇರಿ ಮೂವರ ವಿರುದ್ಧ ದೂರು!

0 comments

Rikki Rai: ರಿಕ್ಕಿ ರೈ ಮೇಲೆ ಮಧ್ಯರಾತ್ರಿ ರಾಮನಗರ ತಾಲೂಕಿನ ಬಿಡದಿಯ ಅವರ ಮನೆ ಬಳಿಯೇ ಫೈರಿಂಗ್‌ ಮಾಡಿರುವ ಘಟನೆ ನಡೆದಿದ್ದು, ರಿಕ್ಕಿ ರೈ ಕೂದಲೆಳೆ ಅಂತರದಲ್ಲಿ ಬಚಾವಾಗಿದ್ದಾರೆ. ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ರಿಕ್ಕಿಗೆ ಚಿಕಿತ್ಸೆ ನಡೆದಿದೆ.

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಿಕ್ಕಿ ಕಾರು ಚಾಲಕ ಬಸವರಾಜು, ರಿಕ್ಕಿ ರೈ ಮೊದಲ ಪತ್ನಿ ಸೇರಿದಂತೆ ಮೂವರ ವಿರುದ್ಧ ಜಿಲ್ಲೆಯ ಬಿಡದೆ ಠಾಣೆಗೆ ದೂರು ನೀಡಿದ್ದಾರೆ.

ರಿಕ್ಕಿ ರೈ ಮೊದಲ ಪತ್ನಿ ಅನ್ನಪೂರ್ಣ, ರಾಕೇಶ್‌ ಮಲ್ಲಿ ಹಾಗೂ ನಿತೇಶ್‌ ಎಸ್ಟೇಟ್‌ ಕಂಪನಿ ವಿರುದ್ಧ ಬಸವರಾಜು ದೂರು ನೀಡಿರುವ ಕುರಿತು ವರದಿಯಾಗಿದೆ. ರಿಯಲ್‌ ಎಸ್ಟೇಟ್‌ ವಿಚಾರ ಈ ಹಿಂದೆ ವಿವಾದವಾಗಿದ್ದು, ಈ ಹಿನ್ನೆಲೆಯಲ್ಲಿ ರಿಕ್ಕಿ ರೈ ಮೇಲೆ ಫೈರಿಂಗ್‌ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಮುತ್ತಪ್ಪ ರೈ ಇದ್ದಾಗಲೇ ರಿಕ್ಕಿ ಮೊದಲ ಪತ್ನಿಯಿಂದ ಡಿವೋರ್ಸ್‌ ಆಗಿತ್ತು. ಎರಡನೇ ಪತ್ನಿ ವಿದೇಶದವರು, ಅವರ ಮಗು ಜೊತೆ ವಿದೇಶದಲ್ಲಿದ್ದು, ರಿಕ್ಕಿ ರೈ ಕೂಡಾ ಹೆಚ್ಚಿನ ಸಮಯ ವಿದೇಶದಲ್ಲೇ ಕಳೆಯುತ್ತಿದ್ದರು ಎಂದು ವರದಿಯಾಗಿದೆ.

You may also like