Home » Crime: ಲಗ್ನ ಪತ್ರಿಕೆ ಗ್ಯಾಂಗ್: ಮದುವೆ ಆಹ್ವಾನ ಕೊಡೋ ನೆಪದಲ್ಲಿ ಮನಗೆ ನುಗ್ಗಿ ಕಳ್ಳತನ

Crime: ಲಗ್ನ ಪತ್ರಿಕೆ ಗ್ಯಾಂಗ್: ಮದುವೆ ಆಹ್ವಾನ ಕೊಡೋ ನೆಪದಲ್ಲಿ ಮನಗೆ ನುಗ್ಗಿ ಕಳ್ಳತನ

0 comments
Marriage

 

Crime: ನಿಮ್ಮ ಆತ್ಮೀಯರಂತೆ ವರ್ತಿಸುತ್ತಾರೆ, ದೂರದ ಸಂಬಂಧಿ, ಹಳೇ ಪರಿಚಯ, ಹೀಗೆ ಒಂದಲ್ಲಾ ಒಂದು ಕಾರಣ ನೀಡಿ ಲಗ್ನ ಪತ್ರಿಕೆ ಗ್ಯಾಂಗ್ ನಿಮ್ಮ ಮನೆಗೆ ಬಂದರೆ ನಿಮ್ಮ ಕಥೆ ಮುಗಿತು ಅನ್ಕೋಳಿ. ದಯವಿಟ್ಟು ಮದುವೆಗೆ ಬರಬೇಕು, ಆಶೀರ್ವಾದವೇ ಉಡುಗೊರೆ, ಬಂದು ನವ ಜೋಡಿಗಳನ್ನು ಹರಸಬೇಕು ಎಂದು ನಯವಿನಯವಾಗಿ ನಿಮ್ಮನ್ನು ಆಮಂತ್ರಿಸುತ್ತಾರೆ. ನೀವು ಒಂದು ಕ್ಷಣ ಪ್ಲಾಶ್ ಬ್ಯಾಕ್ ಹೋದಾಗಲೇ ಈ ಗ್ಯಾಂಗ್ ನಿಮ್ಮ ಮೇಲೆ ದಾಳಿ ಮಾಡಿ ಮನೆಯಿಂದ ಚಿನ್ನಾಭರಣ, ನಗದು ಕಳುವು ಮಾಡುತ್ತೆ ಎಚ್ಚರ. ಇದೀಗ ಆನೇಕಲ್‌ನಲ್ಲಿ ಈ ಲಗ್ನ ಪತ್ರಿಕೆ ದರೋಡೆ ಗ್ಯಾಂಗ್ ಪ್ರಕರಣ ಬೆಳಕಿಗೆ ಬಂದಿದೆ.

ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ನೆರಳೂರಿನಲ್ಲಿ ಲಗ್ನ ಪತ್ರಿಕೆ ಗ್ಯಾಂಗ್ ಪ್ರಕರಣ ಬೆಳಕಿಗೆ ಬಂದಿದೆ. ನೆರಳೂರು ನಿವಾಸಿ ರವಿಕುಮಾರ್, ನಾಗವೇಣಿ ದಂಪತಿ ಮನೆಯಲ್ಲಿ ಕಳ್ಳರು ಹೊಸ ತಂತ್ರದ ಮೂಲಕ ದರೋಡೆ ಮಾಡಿದ್ದಾರೆ. ರವಿಕುಮಾರ್ ಕೆಲಸಕ್ಕೆ ಹೋಗಿದ್ದ ವೇಳೆ ಮದುವೆ ಆಮಂತ್ರಣ ಕೊಟ್ಟು ನಾಗವೇಣಿಯನ್ನು ಕಟ್ಟಿ ಹಾಕಿ ಕಳ್ಳತನ ಮಾಡಿದೆ.

ರವಿಕುಮಾರ್ ಮನೆಗೆ ಇನ್ವಿಟೇಶನ್ ಕಾರ್ಡ್ ಹಿಡಿದು ಮಹಿಳೆಯೊಬ್ಬರು ಎಂಟ್ರಿಕೊಟ್ಟಿದ್ದಾರೆ. ಮದುವೆ ಆಮಂತ್ರಣ ನೀಡುತ್ತಾ, ಕುಡಿಯಲು ನೀರು ಕೊಡಿ ಎಂದು ಮಹಿಳೆ ಕೇಳಿದ್ದರೆ. ನೀರು ತರಲು ನಾಗವೇಣಿ ಮನೆಯ ಒಳಗೆ ಹೋಗಿದ್ದಾರೆ. ಇದೇ ವೇಳೆ ಈ ಗ್ಯಾಂಗ್‌ನ ಪುರುಷ ಸದಸ್ಯರು ಮನೆಯೊಳಗೆ ನುಗ್ಗಿದ್ದಾರೆ. ಮನೆಯೊಳಗೆ ಎಂಟ್ರಿಕೊಟ್ಟ ಪುರುಷ ನಾಗವೇಣಿಯನ್ನು ರೋಮಿನೊಳಗೆ ಕೈಕಾಲು ಕಟ್ಟಿ ಹಾಕಿ 200 ಗ್ರಾಂ ಚಿನ್ನಾಭರಣ, ನಗದು ಹಣ ದೋಚಿದ್ದಾರೆ. ಬಳಿಕ ನಾಗವೇಣಿಯನ್ನು ರೂಮಿನಲ್ಲಿ ಕೂಡಿಟ್ಟು, ಹೊರಗಿನಿಂದ ಬಾಗಿಲು ಹಾಕಿ ಗ್ಯಾಂಗ್ ಪರಾರಿಯಾಗಿದೆ.

ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಅಡಿಷನಲ್ ಎಸ್ಪಿ ವೆಂಕಟೇಶ್ ಪ್ರಸನ್ನ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may also like